ಸರಕಾರಿ ಇಲಾಖೆ ಸೇವೆಗಳು.

ತೀರ್ಥಯಾತ್ರಿಕರ ಸುರಕ್ಷಿತ ಪ್ರಯಾಣಕ್ಕಾಗಿ ಸುರಕ್ಷಿತ ವಲಯ ಯೋಜನೆ.

ಶಬರಿಮಲೆಯ ರಸ್ತೆಗಳಲ್ಲಿ ತೀರ್ಥಯಾತ್ರಿಕರ ಸುರಕ್ಷಿತವಾದ ಪ್ರಯಾಣವನ್ನು ಉದ್ದೇಶವಾಗಿಟ್ಟುಕೊಂಡು ಕೇರಳ ಮೋಟರ್ ವಾಹನ ಇಲಾಖೆ ಮತ್ತು ಕೇರಳ ರಸ್ತೆ ಸುರಕ್ಷಾ ಪ್ರಾಧಿಕಾರ ಇವು ಜಂಟಿಯಾಗಿ ಜಾರಿಗೆ ತಂದ ಯೋಜನೆಯೆ ‘ಸುರಕ್ಷಿತ ವಲಯ ಯೋಜನೆ’. ತೀರ್ಥಯಾತ್ರಾ ಕಾಲವು ಕೊನೆಗೊಳ್ಳುವ ವರೆಗೆ 400ಕಿ.ಮೀ. ವ್ಯಾಪ್ತಿಯಲ್ಲಿ ಸುರಕ್ಷಿತ ವಲಯ ಯೋಜನೆಯ ಸೇವೆ ತೀರ್ಥಯಾತ್ರಿಕರಿಗೆ ಲಭಿಸುತ್ತದೆ.     ‘ಅಪಘಾತ ರಹಿತವಾದ ತೀರ್ಥಯಾತ್ರಾ ಕಾಲ’ ಎಂಬುದನ್ನು ಭಕ್ತರಿಗೆ ದೃಢೀಕರಿಸುವುದೇ ಇಲ್ಲಿನ ಲಕ್ಷ್ಯ.
ಪ್ರಧಾನ ಚೆಕ್ ಪೋಸ್ಟುಗಳು, ಟೋಲ್ ಬೂತುಗಳು, ಗುರುಸ್ವಾಮಿಗಳು, ತಂಗುದಾಣಗಳು, ವಾಹನ ಚಾಲಕರು ಎಂಬಿವರ ನಡುವೆ ಸುರಕ್ಷಿತ ವಲಯದ ಯೋಜನೆಯ ಕುರಿತು ಆರು ಭಾಷೆಗಳಲ್ಲಿ ಕಿರು ಬರಹಗಳನ್ನು ವಿತರಿಸಲಾಗುತ್ತದೆ. ಮಲಯಾಳ, ಇಂಗ್ಲಿಷ್, ಹಿಂದಿ, ತಮಿಳು, ಕನ್ನಡ, ತೆಲುಗು ಎಂಬೀ ಭಾಷೆಗಳಲ್ಲಿ ಸುರಕ್ಷಿತ ವಲಯ ಯೋಜನೆಯ ಪ್ರದೇಶದ ಗಸ್ತು ವಾಹನಗಳಲ್ಲಿ ಹಾಗೂ ರ್ವೆಲ್ವೆ ಸ್ಟೇಶನ್ಗಳಲ್ಲಿ ಘೋಷಣೆಯನ್ನು ಮಾಡಲಾಗುತ್ತದೆ. ಇಲಿವುಂಗಲ್ ಸೇಫ್ ಸೋನ್ ಮೆಯಿನ್ ಕಂಟ್ರೋಲ್ ಆಫೀಸು ಮಾತ್ರವಲ್ಲದೆ ಎರುಮೇಲಿ, ಕುಟ್ಟಿಕ್ಕಾನ ಎಂಬೆಡೆಗಳಲ್ಲಿ ಎರಡು ಸಬ್ ಡಿವಿಷನುಗಳು ಕಾರ್ಯಪ್ರವೃತ್ತವಾಗಿರುತ್ತವೆ. 24 ಗಂಟೆಗಳೂ ಸೇವೆಗೆ ಸಿದ್ಧವಾಗಿರುವ ಸುರಕ್ಷಿತ ವಲಯದ ಇಲಿವುಂಗಲ್, ಕುಟ್ಟಿಕ್ಕಾನ, ಎರುಮೇಲಿ ಎಂಬೀ ಎಡೆಗಳಲ್ಲಿ 24 ಸ್ಕ್ಪಾಡುಗಳು ಕಾರ್ಯವೆಸಗುತ್ತವೆ. ಚಿಕ್ಕದೂ ದೊಡ್ಡದೂ ಆದ ಒಂದು ಕೋಟಿ ವಾಹನಗಳನ್ನು ತೀರ್ಥಯಾತ್ರೆಯ ಮಾರ್ಗದಲ್ಲಿ ನಿರೀಕ್ಷಿಸಲಾಗುತ್ತದೆ. ಈ ಕಾಲದಲ್ಲಿ ನಾಲ್ಕು ಲಕ್ಷ ಕಿ.ಮೀ. ವಿಸ್ತೀರ್ಣ ಪ್ರದೇಶದಲ್ಲಿ ಗಸ್ತು ತಿರುಗುವ ಕೆಲಸ ನಡೆಯುತ್ತದೆ. ಅಪಘಾತ ಸಂಭವಿಸಿದರೆ ತುರ್ತು ಕಾರ್ಯಾಚರಣೆ ಮೂಲಕ ಗಾಯಗೊಂಡವರನ್ನು ಅತಿ ಕಡಿಮೆ ಸಮಯದಲ್ಲಿ ಆಸ್ಪತ್ರೆಗಳಿಗೆ ತಲಪಿಸಲಾಗುತ್ತದೆ. ಇದಕ್ಕಾಗಿ ಆೋಗ್ಯ ಇಲಾಖೆ, ಪೊಲೀಸು ಎಂಬಿವರ ಅಂಬುಲೆನ್ಸ್ ಸೇವೆಯನ್ನು ಉಪಯೋಗಿಸಲಾಗುತ್ತದೆ. ಯಾತ್ರಿಕರ ವಾಹನಗಳು ಕೆಟ್ಟು ಹೋದಲ್ಲಿ, ಸಂಚಾರ ವ್ಯವಸ್ಥೆಗೆ ತೊಡಕಾಗದಂತೆ, ಅಲ್ಲಿಂದ ಸ್ಥಳಾಂತರಿಸಿ ಉಚಿತವಾದ ರಿಪೇರಿ ಕೆಲಸವನ್ನು ನಡೆಸಲಾಗುತ್ತದೆ. 40 ಟನ್ವರೆಗೆ ಭಾರವಿರುವ ವಾಹನಗಳ ರಿಪೇರಿಗಾಗಿ ಇಲವುಂಗಲನ್ನು ಕೇಂದ್ರೀಕರಿಸಿ ಟಯರ್ ಪಂಕ್ಚರ್/ ರಿಪೇರ್ ಮೊಬೈಲ್ ಯೂನಿಟ್ ಕಾರ್ಯ ನಿರ್ವಹಿಸುತ್ತದೆ. ಅಲ್ಲದೆ 35 ವಾಹನ ತಯಾರಕರ 90 ಯಾಂತ್ರಿಕ ತಂಡಗಳೂ ಸಕ್ರಿಯವಾಗಿರುತ್ತವೆ.

ಸುರಕ್ಷಿತ ವಲಯ : ತುರ್ತು ಸಂದರ್ಭಗಳಲ್ಲಿ ಕರೆಯಬಹುದಾದ ಸಹಾಯವಾಣಿ

ಶಬರಿಮಲೆ ಮಂಡಲ-ಮಕರವಿಳಕ್ಕು ಉತ್ಸವಗಳಿಗೆ ಬರುವ ತೀರ್ಥ ಯಾತ್ರಿಕರಿಗೆ ರಕ್ಷಣೆಯನ್ನೊದಗಿಸುವುದಕ್ಕಿರುವುದೇ ‘ಸುರಕ್ಷಿತ ವಲಯ ಯೋಜನೆ’. ವಾಹನಗಳ ಅಪಘಾತವೂ ಸೇರಿದಂತೆ ಯಾವ ತುರ್ತು ಸಂದರ್ಭಗಳಲ್ಲೂ ಯಾತ್ರಿಕರು ಕರೆಯಬಹುದಾದ ಸುರಕ್ಷಿತ ವಲಯ ಸಹಾಯವಾಣಿ ಸಂಖ್ಯೆಗಳು:

ಇಲವುಂಗಲ್    :    09400044991, 09562318181
ಎರುಮೇಲಿ    :    09496367974, 08547639173
ಕುಟ್ಟಿಕ್ಕಾನ    :    09446037100, 08547639176
email ಮೂಲಕವೂ ಸಹಾಯ ಲಭ್ಯ :
safezonesabarimala@gmail.com