ತೀರ್ಥಯಾತ್ರೆಯ ಸೌಕರ್ಯಗಳು

ಆರೋಗ್ಯ ರಕ್ಷಾಕೇಂದ್ರಗಳು (ಸ್ಪೆಷಾಲಿಟಿ ಸೂಪರ್ ಸ್ಪೆಶಾಲಿಟಿ ಸರಕಾರಿ ಖಾಸಗಿ ಆಸ್ಪತ್ರೆಗಳು :

ಮೆಡಿಕಲ್ ಕಾಲೇಜು ಆಸ್ಪತ್ರೆ, ಕೊಟ್ಟಾಯಂ; ಜನರಲ್ ಆಸ್ಪತ್ರೆ, ಪಟ್ಟಣಂತಿಟ್ಟ; ಕಾರ್ಡಿಯೋಲಜಿ ಸೆಂಟರ್, ಪಂಬ; ನೀಲಮಲ, ಅಪ್ಪಾಚ್ಚಿಮೇಡ್, ಸನ್ನಿಧಾನ ಎಂಬೀ ಎಡೆಗಳಲ್ಲಿ ತೀರ್ಥಯಾತ್ರಿಕರಿಗೆ ಚಿಕಿತ್ಸಾ ಸೌಕರ್ಯಗಳು ಲಭ್ಯವಿವೆ. ಪಂಬೆಯಲ್ಲಿಯೂ ನಿಲಯ್ಕಲ್ನಲ್ಲೂ ತುರ್ತು ಚಿಕಿತ್ಸಾ ಸೌಕರ್ಯಗಳಿರುವ ಮೊಬೈಲ್ ಮೆಡಿಕಲ್ ಯೂನಿಟ್ಟುಗಳಿವೆ.

ಕಾರ್ಡಿಯಾಕ್ ಸೆಂಟರುಗಳು :

  • ಅಪ್ಪಾಚ್ಚಿಮೇಡ್ : 04735-202050
  • ನೀಲಿಮಲ  : 04735-203384

ಪಂಬ

  • ಸರಕಾರಿ ಆಸ್ಪತ್ರೆ    04735 - 203318
  • ಸರಕಾರಿ ಹೋಮಿಯೋ ಆಸ್ಪತ್ರೆ     04735 - 203537
  • ಸರಕಾರಿ ಆಯುರ್ವೇದ ಆಸ್ಪತ್ರೆ      04735 - 202536
  • ಸಹಾಸ್ ಹೋಸ್ಪಿಟಲ್        04735 – 203350

ಸನ್ನಿಧಾನ

  • ಸರಕಾರಿ ಆಸ್ಪತ್ರೆ    04735 - 202101
  • ಸರಕಾರಿ ಹೋಮಿಯೋ ಆಸ್ಪತ್ರೆ   04735 - 202843
  • ಸರಕಾರಿ ಆಯುರ್ವೇದ ಆಸ್ಪತ್ರೆ   04735 - 202102
  • ಸಹಾಸ್ ಹೋಸ್ಪಿಟಲ್        04735 - 202080
  • ಎನ್.ಎಸ್.ಎಸ್.ಹೋಸ್ಪಿಟಲ್       04735 - 202010

 

ತೀರ್ಥಯಾತ್ರಿಕರ ಸುರಕ್ಷಿತ ಪ್ರಯಾಣಕ್ಕಾಗಿ ಸುರಕ್ಷಿತ ವಲಯ ಯೋಜನೆ.

ಶಬರಿಮಲೆಯ ರಸ್ತೆಗಳಲ್ಲಿ ತೀರ್ಥಯಾತ್ರಿಕರ ಸುರಕ್ಷಿತವಾದ ಪ್ರಯಾಣವನ್ನು ಉದ್ದೇಶವಾಗಿಟ್ಟುಕೊಂಡು ಕೇರಳ ಮೋಟರ್ ವಾಹನ ಇಲಾಖೆ ಮತ್ತು ಕೇರಳ ರಸ್ತೆ ಸುರಕ್ಷಾ ಪ್ರಾಧಿಕಾರ ಇವು ಜಂಟಿಯಾಗಿ ಜಾರಿಗೆ ತಂದ ಯೋಜನೆಯೆ ‘ಸುರಕ್ಷಿತ ವಲಯ ಯೋಜನೆ’. ತೀರ್ಥಯಾತ್ರಾ ಕಾಲವು ಕೊನೆಗೊಳ್ಳುವ ವರೆಗೆ 400ಕಿ.ಮೀ. ವ್ಯಾಪ್ತಿಯಲ್ಲಿ ಸುರಕ್ಷಿತ ವಲಯ ಯೋಜನೆಯ ಸೇವೆ ತೀರ್ಥಯಾತ್ರಿಕರಿಗೆ ಲಭಿಸುತ್ತದೆ.     ‘ಅಪಘಾತ ರಹಿತವಾದ ತೀರ್ಥಯಾತ್ರಾ ಕಾಲ’ ಎಂಬುದನ್ನು ಭಕ್ತರಿಗೆ ದೃಢೀಕರಿಸುವುದೇ ಇಲ್ಲಿನ ಲಕ್ಷ್ಯ.
ಪ್ರಧಾನ ಚೆಕ್ ಪೋಸ್ಟುಗಳು, ಟೋಲ್ ಬೂತುಗಳು, ಗುರುಸ್ವಾಮಿಗಳು, ತಂಗುದಾಣಗಳು, ವಾಹನ ಚಾಲಕರು ಎಂಬಿವರ ನಡುವೆ ಸುರಕ್ಷಿತ ವಲಯದ ಯೋಜನೆಯ ಕುರಿತು ಆರು ಭಾಷೆಗಳಲ್ಲಿ ಕಿರು ಬರಹಗಳನ್ನು ವಿತರಿಸಲಾಗುತ್ತದೆ. ಮಲಯಾಳ, ಇಂಗ್ಲಿಷ್, ಹಿಂದಿ, ತಮಿಳು, ಕನ್ನಡ, ತೆಲುಗು ಎಂಬೀ ಭಾಷೆಗಳಲ್ಲಿ ಸುರಕ್ಷಿತ ವಲಯ ಯೋಜನೆಯ ಪ್ರದೇಶದ ಗಸ್ತು ವಾಹನಗಳಲ್ಲಿ ಹಾಗೂ ರ್ವೆಲ್ವೆ ಸ್ಟೇಶನ್ಗಳಲ್ಲಿ ಘೋಷಣೆಯನ್ನು ಮಾಡಲಾಗುತ್ತದೆ. ಇಲಿವುಂಗಲ್ ಸೇಫ್ ಸೋನ್ ಮೆಯಿನ್ ಕಂಟ್ರೋಲ್ ಆಫೀಸು ಮಾತ್ರವಲ್ಲದೆ ಎರುಮೇಲಿ, ಕುಟ್ಟಿಕ್ಕಾನ ಎಂಬೆಡೆಗಳಲ್ಲಿ ಎರಡು ಸಬ್ ಡಿವಿಷನುಗಳು ಕಾರ್ಯಪ್ರವೃತ್ತವಾಗಿರುತ್ತವೆ. 24 ಗಂಟೆಗಳೂ ಸೇವೆಗೆ ಸಿದ್ಧವಾಗಿರುವ ಸುರಕ್ಷಿತ ವಲಯದ ಇಲಿವುಂಗಲ್, ಕುಟ್ಟಿಕ್ಕಾನ, ಎರುಮೇಲಿ ಎಂಬೀ ಎಡೆಗಳಲ್ಲಿ 24 ಸ್ಕ್ಪಾಡುಗಳು ಕಾರ್ಯವೆಸಗುತ್ತವೆ. ಚಿಕ್ಕದೂ ದೊಡ್ಡದೂ ಆದ ಒಂದು ಕೋಟಿ ವಾಹನಗಳನ್ನು ತೀರ್ಥಯಾತ್ರೆಯ ಮಾರ್ಗದಲ್ಲಿ ನಿರೀಕ್ಷಿಸಲಾಗುತ್ತದೆ. ಈ ಕಾಲದಲ್ಲಿ ನಾಲ್ಕು ಲಕ್ಷ ಕಿ.ಮೀ. ವಿಸ್ತೀರ್ಣ ಪ್ರದೇಶದಲ್ಲಿ ಗಸ್ತು ತಿರುಗುವ ಕೆಲಸ ನಡೆಯುತ್ತದೆ. ಅಪಘಾತ ಸಂಭವಿಸಿದರೆ ತುರ್ತು ಕಾರ್ಯಾಚರಣೆ ಮೂಲಕ ಗಾಯಗೊಂಡವರನ್ನು ಅತಿ ಕಡಿಮೆ ಸಮಯದಲ್ಲಿ ಆಸ್ಪತ್ರೆಗಳಿಗೆ ತಲಪಿಸಲಾಗುತ್ತದೆ. ಇದಕ್ಕಾಗಿ ಆೋಗ್ಯ ಇಲಾಖೆ, ಪೊಲೀಸು ಎಂಬಿವರ ಅಂಬುಲೆನ್ಸ್ ಸೇವೆಯನ್ನು ಉಪಯೋಗಿಸಲಾಗುತ್ತದೆ. ಯಾತ್ರಿಕರ ವಾಹನಗಳು ಕೆಟ್ಟು ಹೋದಲ್ಲಿ, ಸಂಚಾರ ವ್ಯವಸ್ಥೆಗೆ ತೊಡಕಾಗದಂತೆ, ಅಲ್ಲಿಂದ ಸ್ಥಳಾಂತರಿಸಿ ಉಚಿತವಾದ ರಿಪೇರಿ ಕೆಲಸವನ್ನು ನಡೆಸಲಾಗುತ್ತದೆ. 40 ಟನ್ವರೆಗೆ ಭಾರವಿರುವ ವಾಹನಗಳ ರಿಪೇರಿಗಾಗಿ ಇಲವುಂಗಲನ್ನು ಕೇಂದ್ರೀಕರಿಸಿ ಟಯರ್ ಪಂಕ್ಚರ್/ ರಿಪೇರ್ ಮೊಬೈಲ್ ಯೂನಿಟ್ ಕಾರ್ಯ ನಿರ್ವಹಿಸುತ್ತದೆ. ಅಲ್ಲದೆ 35 ವಾಹನ ತಯಾರಕರ 90 ಯಾಂತ್ರಿಕ ತಂಡಗಳೂ ಸಕ್ರಿಯವಾಗಿರುತ್ತವೆ.

ಸುರಕ್ಷಿತ ವಲಯ : ತುರ್ತು ಸಂದರ್ಭಗಳಲ್ಲಿ ಕರೆಯಬಹುದಾದ ಸಹಾಯವಾಣಿ

ಶಬರಿಮಲೆ ಮಂಡಲ-ಮಕರವಿಳಕ್ಕು ಉತ್ಸವಗಳಿಗೆ ಬರುವ ತೀರ್ಥ ಯಾತ್ರಿಕರಿಗೆ ರಕ್ಷಣೆಯನ್ನೊದಗಿಸುವುದಕ್ಕಿರುವುದೇ ‘ಸುರಕ್ಷಿತ ವಲಯ ಯೋಜನೆ’. ವಾಹನಗಳ ಅಪಘಾತವೂ ಸೇರಿದಂತೆ ಯಾವ ತುರ್ತು ಸಂದರ್ಭಗಳಲ್ಲೂ ಯಾತ್ರಿಕರು ಕರೆಯಬಹುದಾದ ಸುರಕ್ಷಿತ ವಲಯ ಸಹಾಯವಾಣಿ ಸಂಖ್ಯೆಗಳು:

ಇಲವುಂಗಲ್    :    09400044991, 09562318181
ಎರುಮೇಲಿ    :    09496367974, 08547639173
ಕುಟ್ಟಿಕ್ಕಾನ    :    09446037100, 08547639176
email ಮೂಲಕವೂ ಸಹಾಯ ಲಭ್ಯ :
safezonesabarimala@gmail.com

 

ಪಂಪಾ:
404 ಶುದ್ಧಜಲ ನಳ್ಳಿಗಳು
ಮೂರು ಶುಂಠಿನೀರನ್ನು ವಿತರಿಸುವ ಕೇಂದ್ರಗಳು

ಸನ್ನಿಧಾನ:
306 ಶುದ್ಧಜಲ ನಳ್ಳಿಗಳು
40 ಶುಂಠಿನೀರಿನ ವಿತರಣೆಯ ಕೌಂಟರುಗಳು.

ನಿಲಯ್ಕಲ್:
1200 ಶುದ್ಧಜಲ ನಳ್ಳಿಗಳು
8 ಶುಂಠಿನೀರನ್ನು ವಿತರಿಸುವ ಕೌಂಟರುಗಳು

 

ಶಬರಿಮಲೆ ಮಂಡಲ - ಮಕರವಿಳಕ್ಕು ತೀರ್ಥಯಾತ್ರಾ ಸಂಬಂಧವಾಗಿ ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ತೀರ್ಥಯಾತ್ರಿಕರಿಗಾಗಿ 25 ತಂಗುದಾಣಗಳನ್ನೂ ಸ್ಥಾಪಿಸಲಾಗಿದೆ. ಆ ತಂಗುದಾಣಗಳು ದಿನದ 24 ಗಂಟೆಗಳೂ ಕಾರ್ಯಪ್ರವೃತ್ತವಾಗಿರುತ್ತವೆ. ಮಹಿಳಾ ಪೊಲೀಸ್ ಅಧಿಕಾರಿಗಳ ಸೇವೆ ಸದಾ ಲಭ್ಯವಿರುತ್ತದೆ. ಎಲ್ಲಾ ತಂಗುದಾಣಗಳಲ್ಲೂ ಪೊಲೀಸರ ರಾತ್ರಿ ಗಸ್ತು ತಿರುಗುವಿಕೆ ಇರುತ್ತದೆ. ಯಾತ್ರಿಕರಿಗೆ ‘ವಿರಿ’ ಇಡಲಿರುವ ಸೌಕರ್ಯ, ಆಹಾರ, ಕುಡಿಯುವ ನೀರು, ಶೌಚಾಲಯ ಎಂಬೀ ಅನುಕೂಲತೆಗಳು ಎಲ್ಲಾ ತಂಗುದಾಣಗಳಲ್ಲೂ ಲಭ್ಯವಿರುತ್ತವೆ.

  • ಅಡೂರ್ ಏಳಾಂಕುಳಂ ದೇವೀ ಕ್ಷೇತ್ರ
  • ಪಂದಳಂ ವಲಿಯ ಕೋಯಿಕ್ಕಲ್ ಶ್ರೀ ಧರ್ಮಶಾಸ್ತಾ ಕ್ಷೇತ್ರ
  • ಕೋನ್ನಿ ಮುರಿಙ್ಙಮಂಗಲಂ ಕ್ಷೇತ್ರ
  • ಕೊಡುಮಣ್ ತೊಲುಳಂ ಜಂಗ್ಶನ್
  • ಪತ್ತನಂತಿಟ್ಟ ತಂಗುದಾಣ
  • ಓಮಲ್ಲೂರ್ ಶ್ರೀ ರಕ್ತಕಂಠ ಸ್ವಾಮಿ ಕ್ಷೇತ್ರ
  • ಮಲಯಾಲಪ್ಪುಳ ದೇವಿ ಕ್ಷೇತ್ರ
  • ಆರನ್ಮುಳ ಪಾರ್ಥಸಾರಥಿ ಕ್ಷೇತ್ರ
  • ಇಲಂದೂರ್ ಪಂಚಾಯತ್ ಸ್ಟೇಡಿಯಂ
  • ಕೋಯಂಜೇರಿ ಪಂಚಾಯತ್ ಸ್ಟೇಡಿಯಂ
  • ಅಯಿರೂರ್ ಕ್ಷೇತ್ರ
  • ತೆಳ್ಳಿಯೂರ್
  • ತಿರುವಲ್ಲ ಮುನಿಸಿಪಲ್ ಸ್ಟೇಡಿಯಂ
  • ಮೀಂದಲಕ್ಕರ ಶಾಸ್ತಾ ಕ್ಷೇತ್ರ
  • ರಾನ್ನಿ ತಂಗುದಾಣ ಪಳವಙ್ಙಾಡಿ
  • ರಾನ್ನಿ ರಾಮಪುರಂ ಕ್ಷೇತ್ರ
  • ಕೂನಂಕರ ಶಬರೀ ಶರಣಾಶ್ರಮ
  • ಪೆರುನಾಡ್ ತಂಗುದಾಣ
  • ಪೆರುನಾಡ್ ಯೋಗಮಾಯ ಆಶ್ರಮ
  • ವಡಶೇರಿಕ್ಕರ ಚೆರಿಯ ಕಾವ್ ದೇವಿ ಕ್ಷೇತ್ರ
  • ವಡಶೇರಿಕ್ಕರ ಪ್ರಯಾರ್ ಮಹಾವಿಷ್ಣು ಕ್ಷೇತ್ರ
  • ಪೆರುನಾಡ್ ಕಾಕ್ಕಾಡ್ ಕೋಯಿಕ್ಕಲ್ ಧರ್ಮಶಾಸ್ತಾ ಕ್ಷೇತ್ರ
  • ಪೆರುನಾಡ್ ಮೂಡಮಣ್ ಋಷಿಕೇಶ ಕ್ಷೇತ್ರ
  • ಕುಳನಡ ಶ್ರೀಕೃಷ್ಣ ಸ್ವಾಮಿ ಕ್ಷೇತ್ರ
  • ಕುಳನಡ ಪಂಚಾಯತ್ ತಂಗುದಾಣ  

 

ಶಬರಿಮಲೆ ಶ್ರೀ ಧರ್ಮಶಾಸ್ತಾ ಅನ್ನದಾನ ಟ್ರಸ್್ಟ.

ಪಶ್ಚಿಮ ಘಟ್ಟದ ಪೆರಿಯಾರ್ ಹುಲಿ ಅಭಯಾರಣ್ಯದಲ್ಲಿ ಅಂತಾರಾಷ್ಟ್ರೀಯ ಮಹತ್ವದ ಶಬರಿಮಲೆ ಧರ್ಮಶಾಸ್ತಾ ಕ್ಷೇತ್ರವಿದೆ. ಪ್ರತಿವರ್ಷ ಭಾರತೀಯರೂ ವಿದೇಶಿಗಳೂ ಕೋಟಿ ಕೋಟಿ ಸಂಖ್ಯೆಯಲ್ಲಿ ತೀರ್ಥಯಾತ್ರಿಕರಾಗಿ ಶಬರಿಮಲೆಯ ಸನ್ನಿಧಾನವನ್ನು ತಲಪುತ್ತಾರೆ. ಕ್ಷೇತ್ರದ ಪ್ರಧಾನ ಮೂರ್ತಿಯಾದ ಶ್ರೀ ಅಯ್ಯಪ್ಪ ಸ್ವಾಮಿಯನ್ನು ಯಾತ್ರಿಕರು ‘ಅನ್ನದಾನಪ್ರಭು’ ಎಂದೇ ಕರೆಯುತ್ತಾರೆ. ಆದುದರಿಂದ ಶಬರಿಮಲೆಗೆ ತಲಪುತ್ತಿರುವ ಯಾತ್ರಿಕರಿಗೆ ಉಣಬಡಿಸುವುದು ಎಂಬುದು ದೇವರಿಗೆ ಒಂದು ಸಮರ್ಪಣೆಯಾಗಿ, ಅಯ್ಯಪ್ಪಧರ್ಮವಾಗಿ ಪರಿಗಣಿತವಾಗುತ್ತದೆ. ಶಬರಿಮಲೆ ಕ್ಷೇತ್ರದ ಆಡಳಿತ ಸಮಿತಿಯಾದ ತಿರುವಾಂಕೂರ್ ದೇವಸ್ವಂಬೋರ್ಡ್ ತೀರ್ಥಯಾತ್ರಿಕರಿಗೆ ಶಬರಿಮಲೆಯಲ್ಲಿಯೂ ಪಂಬೆಯಲ್ಲಿಯೂ, ನಡುನಡುವೆ ಬರುವ ತಂಗುದಾಣಗಳಲ್ಲೂ ಉಚಿತವಾದ ಊಟದ ಯೋಜನೆಯನ್ನು ಜಾರಿಗೆ ತಂದಿದೆ. ಕೋಟಿ ಸಂಖ್ಯೆಯಲ್ಲಿ ತೀರ್ಥಯಾತ್ರಿಕರು ಬರುತ್ತಿರುವುದರಿಂದ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವುದಕ್ಕೆ ಸಂಪನ್ಮೂಲದ ಅಗತ್ಯವಿದೆ. ಶಬರಿಮಲೆಯಲ್ಲಿಯೂ ಇತರ ದೇವಾಲಯಗಳಲ್ಲಿಯೂ ಭಕ್ತರಿಗೆ ಉಚಿತ ಊಟದ ವ್ಯವಸ್ಥೆ ಮಾಡುವುದಕ್ಕಾಗಿ ದೇವಸ್ವಂಬೋರ್ಡ್ ಶಬರಿಮಲೆ ‘ಶ್ರೀ ಧರ್ಮಶಾಸ್ತಾ ಅನ್ನದಾನ ಟ್ರಸ್ಟ್’ ಎಂಬ ಹೆಸರಿನಲ್ಲಿ ಒಂದು ಟ್ರಸ್ಟನ್ನುರೂಪಿಸಿದೆ. ಇದೇ ಟ್ರಸ್ಟ್ ಮಾಳಿಕಪ್ಪುರ ಕ್ಷೇತ್ರದ ಹಿಂದೆ ಒಂದು ಅನ್ನದಾನ ಮಂಟಪವನ್ನು ನಿರ್ಮಿಸಿದೆ. ಇದು ಸಮಸ್ತ ಭಾರತದಲ್ಲಿಯೇ ಅತಿ ಬೃಹತ್ತಾದ ಅನ್ನದಾನ ಮಂಟಪವೆನಿಸಿದೆ. ಸದಾ ಎರಡು ಲಕ್ಷಕ್ಕೂ ಮಿಗಿಲಾದ ಯಾತ್ರಿಕರಿಗೆ ಉಚಿತವಾದ ಆಹಾರವನ್ನು ಒದಗಿಸಲು ಮಂಟಪ ಸನ್ನದ್ಧವಾಗಿದೆ.

ಈ ಯೋಜನೆಗೆ ದೇಣಿಗೆ ಕಳಿಸಿಕೊಡಲಿರುವ ವಿಳಾಸ:
ಎಕ್ಸಿಕ್ಯೂಟೀವ್ ಆಫೀಸರ್, ಶಬರಿಮಲ ದೇವಸ್ವಂ,
ಪಟ್ಟಣಂತಿಟ್ಟ ಜಿಲ್ಲೆ, ಕೇರಳ. ದೂರವಾಣಿ: 04735-202028

ಅಥವಾ

ದೇವಸ್ವಂ ಅಕೌಂಟ್ ಆಫೀಸರ್
ತಿರುವಾಂಕೂರು ದೇವಸ್ವಂ ಬೋರ್ಡ್
ನಂದನ್ಕೋಡ್, ತಿರುವನಂತಪುರಂ
ದೂರವಾಣಿ : 0471-2315837
Fax: 0471-2315834
E.mail: devaswomaccountsoffier@gmail.com

ಶಬರಿಮಲೆ ಶ್ರೀಧರ್ಮಶಾಸ್ತಾ ಅನ್ನದಾನ ಟ್ರಸ್ಟ್ನ ಹೆಸರಿನಲ್ಲಿ ಕ್ರಾಸ್ ಮಾಡಿದ ಚೆಕ್ ಅಥವಾ ಡಿ.ಡಿ ರೂಪದಲ್ಲಿಯೂ ದೇಣಿಗೆ ನೀಡಬಹುದಾಗಿದೆ. ನೀಡುವ ದೇಣಿಗೆಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80G (5) (VI) ಅಡಿಯಲ್ಲಿ ವಿನಾಯಿತಿ ಲಭಿಸುತ್ತದೆ.

RTGS/NEFT ಮೂಲಕ ವ್ಯವಹಾರಕ್ಕಿರುವ ಖಾತೆ ಸಂಖ್ಯೆಗಳು.

ಧನಲಕ್ಷ್ಮೀ ಬ್ಯಾಂಕ್, ನಂದನ್ ಕೋಡ್, ತಿರುವನಂತಪುರಂ
ಖಾತೆ ಸಂಖ್ಯೆ : 012601200000086
IFSC Code  : DLXB0000275
ಎಚ್.ಡಿ.ಎಫ್.ಸಿ. ಬ್ಯಾಂಕ್, ಶಾಸ್ತಮಂಗಲಂ, ತಿರುವನಂತಪುರಂ
ಅಕೌಂಟ್ ನಂಬರು : 15991110000014
IFSC Code  : HDFC0001599
ಶಬರಿಮಲೆಯ ಅಧಿಕೃತ ವೆಬ್ಸೈಟ್ ಮೂಲಕ ಓನ್ಲೈನ್ ದೇಣಿಗೆಗಳನ್ನು ಸ್ವೀಕರಿಸಲಾಗುತ್ತದೆ.
www.sabarimala.tdb.org.in.
ಅಥವಾ ಧನಲಕ್ಷ್ಮೀ ಬ್ಯಾಂಕ್ನ ಇಲ್ಲವೆ ಎಚ್.ಡಿ.ಎಫ್.ಸಿ ಬ್ಯಾಂಕ್ನ ನೆಟ್ಬ್ಯಾಂಕಿಂಗ್ ಸೌಕರ್ಯವನ್ನು ಉಪಯೋಗಿಸಿಕೊಳ್ಳಬಹುದು.
www.dhanbank.com
www.hdfcbanks.com


ಈ ಯೋಜನೆಯಡಿ ನೀಡಿದ ಕೊಡುಗೆಗಾಗಿ ಲಭಿಸುವ ಅನುಕೂಲತೆಗಳು.

ಐವತ್ತು ಲಕ್ಷ ರೂಪಾಯಿ
ದಾನಿ ಅಥವಾ ನಾಮಿನಿ ಹೆಸರಿನಲ್ಲಿ ಹತ್ತು ವರ್ಷಗಳ ಕಾಲ ದಿನಾ ಮೂರು ಹೊತ್ತು ಅನ್ನದಾನ ಮಾಡಲಾಗುತ್ತದೆ. ಮಂಡಲ ಪೂಜೆಗೂ ಮಕರವಿಳಕ್ಕಿಗೂ ಹಿಂದಿನ ನಾಲ್ಕು ದಿನಗಳನ್ನು ಬಿಟ್ಟು ವರ್ಷದಲ್ಲಿ ಐದು ದಿನ ಉಚಿತ ವಸತಿ ಸೌಕರ್ಯದೊಂದಿಗೆ ಸಾವಕಾಶವಾಗಿ ದೇವರ ದರ್ಶನ ಮಾಡುವ ಸವಲತ್ತು ಲಭಿಸುತ್ತದೆ. ಅರವಣದ ಎರಡು ಕ್ಯಾನ್ (ತಲಾ 250. ಮಿ.ಲಿ) ಮತ್ತು ಹದಿನೈದು ವರ್ಷಗಳ ಕಾಲ ಎರಡು ಪ್ಯಾಕೆಟ್ ಅಪ್ಪಂ ಅನ್ನು ಒಳಗೊಂಡ ಪ್ರಸಾದ ಕಿಟ್ ಲಭಿಸುವುದು.

ಇಪ್ಪತ್ತೈದು ಲಕ್ಷ ರೂಪಾಯಿ
ದಾನಿಗಳ ಅಥವಾ ಅವರು ಸೂಚಿಸುವ ವ್ಯಕ್ತಿಗಳ ಹೆಸರಿನಲ್ಲಿ ನಾಲ್ಕು ವರ್ಷಗಳ ಕಾಲ ದಿನಾ ಮೂರು ಹೊತ್ತು ಅನ್ನದಾನ ನಡೆಯುವುದು.
ಮಂಡಲಪೂಜೆ ಮತ್ತು ಮಕರವಿಳಕ್ಕಿಗೆ ಹಿಂದಿನ ನಾಲ್ಕು ದಿನಗಳನ್ನು ಹೊರತುಪಡಿಸಿ ವರ್ಷದಲ್ಲಿ ಮೂರು ದಿನಗಳವರೆಗೆ ಬಾಡಿಗೆಮುಕ್ತ ವಸತಿ, ಸಾವಕಾಶವಾದ ಸ್ವಾಮಿಯ ದರ್ಶನ ವ್ಯವಸ್ಥೆ ಲಭಿಸುವುದು. ಅರವಣದ ಎರಡು ಕ್ಯಾನ್ಗಳು(ತಲಾ 250ಮಿ.ಲಿ) ಮತ್ತು ಹತು್ತವರ್ಷ ಗಳ ಕಾಲ ಅಪ್ಪಂನ ಎರಡು ಪ್ಯಾಕೆಟ್ಗಳನ್ನೊಳಗೊಂಡ ಪ್ರಸಾದ ಕಿಟ್

ಇಪ್ಪತ್ತು ಲಕ್ಷ ರೂಪಾಯಿ
ದಾನಿ/ನಾಮಿನಿ ಹೆಸರಿನಲ್ಲಿ ಮೂರು ವರ್ಷಗಳವರೆಗೆ ದಿನಕ್ಕೆ ಮೂರು ಬಾರಿಯಂತೆ ಅನ್ನದಾನ ಮಾಡಲಾಗುವುದು.
ಮಂಡಲಪೂಜೆ ಮತ್ತು ಮಕರವಿಳಕ್ಕಿನ ಹಿಂದಿನ ನಾಲ್ಕು ದಿನಗಳನ್ನು ಹೊರತುಪಡಿಸಿ ವರ್ಷದಲ್ಲಿ ಮೂರು ದಿನಗಳವರೆಗೆ ಉಚಿತ ವಸತಿ ಮತ್ತು ಅನುಕೂಲಕರ ದರ್ಶನ ಸೌಲಭ್ಯ.
ಅರವಣದ ಎರಡು ಕ್ಯಾನ್ಗಳು (ತಲಾ 250 ಮಿ.ಲಿ) ಮತ್ತು ಹತ್ತು ವರ್ಷಗಳ ಕಾಲ ಅಪ್ಪಂನ ಎರಡು ಪ್ಯಾಕೆಟುಗಳನ್ನೊಳಗೊಂಡ ಪ್ರಸಾದ ಕಿಟ್

ರೂಪಾಯಿ ಹದಿನೈದು ಲಕ್ಷ
ದಾನಿ/ ನಾಮಿನಿ ಹೆಸರಿನಲ್ಲಿ ಮೂರು ವರ್ಷಗಳ ಕಾಲ ದಿನಕ್ಕೆ ಮೂರು ಬಾರಿಯಂತೆ ಅನ್ನದಾನ ವ್ಯವಸ್ಥೆ
ಐದು ವರ್ಷಗಳ ಕಾಲ ಮಂಡಲ ಪೂಜೆ ಮತ್ತು ಮಕರವಿಳಕ್ಕಿಗೆ ಹಿಂದಿನ ನಾಲ್ಕು ದಿನಗಳನ್ನು ಹೊರತುಪಡಿಸಿ ವರ್ಷದಲ್ಲಿ ಮೂರು ದಿನಗಳವರೆಗೆ ಉಚಿತ ವಸತಿ ಮತ್ತು ಅನುಕೂಲಕರ ದರ್ಶನ ಸೌಲಭ್ಯ. ಅರವಣದ ಎರಡು ಕ್ಯಾನ್ಗಳು(ತಲಾ 250ಮಿ.ಲಿ) ಮತ್ತು ಹತ್ತು ವರ್ಷಗಳ ಕಾಲ ಅಪ್ಪಂನ ಎರಡು ಪ್ಯಾಕೆಟ್ಗಳನ್ನು ಒಳಗೊಂಡ ಪ್ರಸಾದ ಕಿಟ್

ರೂಪಾಯಿ ಹತ್ತು ಲಕ್ಷ
ದಾನಿ/ನಾಮಿನಿ ಹೆಸರಿನಲ್ಲಿ ಎರಡು ವರ್ಷಗಳ ಕಾಲ ದಿನಕ್ಕೆ ಎರಡು ಬಾರಿಯಂತೆ ಅನ್ನದಾನ ಮಾಡಲಾಗುವುದು. ಐದು ವರ್ಷಗಳ ಕಾಲ ಮಂಡಲ ಪೂಜೆ ಮತ್ತು ಮಕರವಿಳಕ್ಕಿಗೆ ಹಿಂದಿನ ನಾಲ್ಕು ದಿನಗಳನ್ನು ಹೊರತುಪಡಿಸಿ ವರ್ಷದಲ್ಲಿ ಎರಡು ದಿನ ಉಚಿತ ವಸತಿ ಮತ್ತು ಅನುಕೂಲಕರ ದರ್ಶನ ಸೌಲಭ್ಯ. ಅರವಣದ ಎರಡು ಕ್ಯಾನ್ಗಳು (ತಲಾ 250 ಮಿ.ಲಿ) ಮತ್ತು ಹತ್ತು ವರ್ಷಗಳ ಕಾಲ ಅಪ್ಪಂನ ಎರಡು ಪ್ಯಾಕೆಟ್ಗಳನ್ನು ಒಳಗೊಂಡ ಪ್ರಸಾದ ಕಿಟ್.

ರೂಪಾಯಿ ಐದು ಲಕ್ಷ
ದಾನಿ/ನಾಮಿನಿ ಹೆಸರಿನಲ್ಲಿ ಒಂದು ವರ್ಷ ಕಾಲ ದಿನಕ್ಕೆ ಎರಡು ಬಾರಿಯಂತೆ ಅನ್ನದಾನ ಮಾಡಲಾಗುವುದು. ಮಂಡಲ ಪೂಜೆ ಮತ್ತು ಮಕರವಿಳಕ್ಕಿಗೆ ಹಿಂದಿನ ನಾಲ್ಕು ದಿನಗಳನ್ನು ಹೊರತುಪಡಿಸಿ ವರ್ಷದಲ್ಲಿ ಒಂದು ದಿನ ಉಚಿತ ವಸತಿ ಮತ್ತು ಅನುಕೂಲಕರ ದರ್ಶನ ಸೌಲಭ್ಯ. ಅರವಣದ ಎರಡು ಕ್ಯಾನ್ಗಳು(ತಲಾ 250ಮಿ.ಲಿ) ಮತ್ತು ಹತು್ತವರ್ಷಗಳ ಕಾಲ ಅಪ್ಪಂನ ಎರಡು ಪ್ಯಾಕೆಟ್ಗಳನ್ನೊಳಗೊಂಡ ಪ್ರಸಾದ ಕಿಟ್

ರೂಪಾಯಿ ಮೂರು ಲಕ್ಷ
ದಾನಿ/ನಾಮಿನಿಯ ಹೆಸರಿನಲ್ಲಿ ಒಂದು ವರ್ಷ ಕಾಲ ದಿನಕ್ಕೆ ಒಂದು ಬಾರಿಯಂತೆ ಅನ್ನದಾನ ಮಾಡಲಾಗುವುದು. ಮಂಡಲ ಪೂಜೆ ಮತ್ತು ಮಕರವಿಳಕ್ಕಿಗೆ ಹಿಂದಿನ ನಾಲ್ಕು ದಿನಗಳನ್ನು ಹೊರತುಪಡಿಸಿ ವರ್ಷದಲ್ಲಿ ಒಂದು ದಿನ ಉಚಿತ ವಸತಿ ಮತ್ತು ಅನುಕೂಲಕರ ದರ್ಶನ ಸೌಲಭ್ಯ. ಅರವಣದ ಎರಡು ಕ್ಯಾನ್ಗಳು (ತಲಾ 250 ಮಿ.ಲಿ) ಮತ್ತು ಹತ್ತು ವರ್ಷಗಳ ಕಾಲ ಅಪ್ಪಂನ ಎರಡು ಪ್ಯಾಕೆಟ್ಗಳನ್ನು ಒಳಗೊಂಡ ಪ್ರಸಾದ ಕಿಟ್.

ಭಕ್ತನು ಯಾವುದೇ ಮೊತ್ತವನ್ನು ರೂ. 100ರ ಗುಣಕದಲ್ಲಿ ದಾನ ಮಾಡಬಹುದು.

ಸಂಸ್ಥೆಗಳು, ಕಂಪನಿಗಳು ಮತ್ತು ಜಂಟಿ ದಾನಿಗಳು/ಪ್ರಾಯೋಜಕರ ವಿಷಯದಲ್ಲಿ ಸವಲತ್ತುಗಳನ್ನು ನಾಮಿನಿಗೆ ವಿಸ್ತರಿಸಲಾಗುವುದು. ವೈಯುಕ್ತಿಕ ದಾನಿಗಳು/ಪ್ರಾಯೋಜಕರು ಬಯಸಿದಲ್ಲಿ ನಾಮ ನಿರ್ದೇಶನ ಸೌಲಭ್ಯ ವನ್ನು ಬಳಸಿಕೊಳ್ಳಲು ಒಪ್ಪಿಗೆ ನೀಡಲಾಗುವುದು. ಈ ಯೋಜನೆಯಡಿ ಅನ್ನದಾನವನ್ನು ಎಲ್ಲ ಭಕ್ತರಿಗೆ ಯಾವುದೇ ಮಿತಿಯಿಲ್ಲದೆ ನೀಡಲಾಗುವುದು.

ಅಯ್ಯಪ್ಪ ಸ್ವಾಮಿಯ ಅನುಗ್ರಹದೊಂದಿಗೆ,
ಶಬರಿಮಲೆ ಶ್ರೀ ಧರ್ಮಶಾಸ್ತಾ ಅನ್ನದಾನ ಟ್ರಸ್ಟಿನ ಪರವಾಗಿ,

ದೇವಸ್ವಂ ಆಯುಕ್ತ ಮತ್ತು ಟ್ರಸ್ಟಿ
ದೇವಸ್ವಂ ಆಯುಕ್ತ ಕಛೇರಿ
ನಂದನ್ಕೋಡ್, ತಿರುವನಂತಪುರಂ-695003
ದೂರವಾಣಿ : 0471-2315156, 2314288
Fax: 0471-2315156
E-mail: sabarimala.annadanam@gmail.com

 

ಪಂಬ
ಒಟ್ಟು 346
60 ಸ್ತ್ರೀಯರಿಗಾಗಿರುವ ಶೌಚಾಲಯ
60 ಜೈವಿಕ ಶೌಚಾಲಯಗಳು
40 ಬಯೋ ಮೂತ್ರಾಲಯಗಳು
ಪಂಬ ಮೊದಲುಗೊಂಡು ಶಬರಿಮಲೆವರೆಗಿನ ಸಾಂಪ್ರದಾಯಿಕ ದಾರಿಯಲ್ಲಿ ಹತ್ತು ಬಯೋ ಟಾಯ್ಲೆಟ್ಗಳೂ 36 ಜೈವಿಕ ಮೂತ್ರಾಲಯಗಳು ಇವೆ.

ನಿಲಯ್ಕಲ್
ಒಟ್ಟು 1090
60 ಸ್ನಾನಗೃಹಗಳು ಮತ್ತು 120 ಮೂತ್ರಾಲಯಗಳು

ಸನ್ನಿಧಾನ
ಒಟ್ಟು 1161 ಶೌಚಾಲಯಗಳು
160 ಸ್ನಾನಗೃಹಗಳು ಮತ್ತು 150 ಮೂತ್ರಾಲಯಗಳು

 

 

ಪಂಬ
ಅನ್ನದಾನ ಮಂಟಪ, ಪಂಬ

ನಿಲಯ್ಕಲ್
ಅನ್ನದಾನ ಮಂಟಪಂ, ನಿಲಯ್ಕಲ್

ಸನ್ನಿಧಾನ
ಅನ್ನದಾನ ಮಂಟಪ
ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಭೋಜನ, ರಾತ್ರಿಯ ಊಟ ಎಂಬಿವು ಇಲ್ಲಿ ಲಭ್ಯವಾಗುತ್ತವೆ.

 

ಸನ್ನಿಧಾನದಲ್ಲಿ ಪ್ರಸಾದ ವಿತರಣೆಗಾಗಿ ಪ್ರತ್ಯೇಕ ಕೌಂಟರುಗಳು ಇವೆ.

 

ಕೆಳಗೆ ಸೂಚಿಸಿದ ದರಗಳ ಪ್ರಕಾರ ವಿವಿಧ ರೀತಿಯ ಕೋಣೆಗಳು ಲಭ್ಯವಿರುತ್ತವೆ.

ಕೊಠಡಿ ಮಾದರಿ.

 ಬಾಡಿಗೆ ದರ (12 ಗಂಟೆಗಳು)

ಬಾಡಿಗೆ ದರ (16 ಗಂಟೆಗಳು).

ಒಟ್ಟು ಕೋಣೆಗಳು (ಎಂಬ ಕ್ರಮದಲ್ಲಿ)

ವರ್ಗ ಎ

250

350

138

ವರ್ಗ ಬಿ

400

600

71

ವರ್ಗ ಸಿ

450

650

276

ವರ್ಗ ಡಿ

500

700

2

ವರ್ಗ ಇ

650

850

64

ವರ್ಗ ಎಫ್

750

1050

2

ವರ್ಗ ಜಿ

850

1150

4

ವರ್ಗ ಎಚ್

975

1375

2

ವರ್ಗ ಐ

1125

1525

1

ವರ್ಗ ಜೆ

1200

1600

4

ವರ್ಗ ಕೆ

1600

2200

1

900 ವಾಹನಗಳ ನಿಲುಗಡೆಗೆ ಸಾಧ್ಯವಿರುವ 16 ಸಮತಟ್ಟು ನೆಲ. 2000 ವಾಹನಗಳ ನಿಲುಗಡೆಗೆ ಅನುಕೂಲವಿರುವ ಮತ್ತೊಂದು ಪಾರ್ಕಿಂಗ್ ಗ್ರೌಂಡ್ನ ನಿರ್ಮಾಣ ಪೂರ್ತಿಯಾಗುತ್ತಿದೆ.