ಆರ್ಯಂಗಾವ್ ಅಯ್ಯಪ್ಪ ದೇವಾಲಯ

ಅಯ್ಯಪ್ಪ ದೇವಾಲಯದಿಂದಾಗಿ ಆರ್ಯಂಗಾವ್ ಹೆಸರುವಾಸಿಯಾಗಿದೆ. ಕೊಲ್ಲಂ ಜಿಲ್ಲೆಯ ಈ ಅಯ್ಯಪ್ಪ ದೇವಸ್ಥಾನವು ಕೇರಳದ ಐದು ಪ್ರಸಿದ್ಧವಾದ ಅಯ್ಯಪ್ಪ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವನ್ನು ಅಯ್ಯಂಗಾವ್ ಶಾಸ್ತಾ ಕ್ಷೇತ್ರ ಎಂದೂ ಕರೆಯುತ್ತಾರೆ. ಭಗವಾನ್ ಅಯ್ಯಪ್ಪನನ್ನು ಇಲ್ಲಿ ಬಾಲಕನ ರೂಪದಲ್ಲಿ ಆರಾಧಿಸಲಾಗುತ್ತದೆ. ಅಯ್ಯಪ್ಪನನ್ನು ಇಲ್ಲಿ ತಿರು ಆರ್ಯನ್ ಎಂದೂ ಕರೆಯುವುದರಿಂದ ಈ ಸ್ಥಳಕ್ಕೆ ಆರ್ಯಂಗಾವ್ ಎಂಬ ಹೆಸರೂ ರೂಢಿಯಲ್ಲಿದೆ. ಕಾಡುಗಳಿಂದ ಆವೃತವಾಗಿರುವ ಈ ದೇವಾಲಯವು ತಿರುವನಂತಪುರ-ತೆಂಕಾಶಿ ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಶಬರಿಮಲೆಯಲ್ಲಿರುವಂತೆ 10 ರಿಂದ 50 ವರ್ಷ ಪ್ರಾಯದ ಮಹಿಳೆಯರಿಗೆ ಈ ದೇವಾಲಯದೊಳಗೆ ಪ್ರವೇಶವಿಲ್ಲ.

ಈ ಕ್ಷೇತ್ರದ ಆಚರಣೆಗಳು ಮತ್ತು ಪೂಜೆಗಳು ತಮಿಳು ಸಂಪ್ರದಾಯದಲ್ಲಿವೆ. ದೇವಾಲಯದ ಗರ್ಭಗೃಹದಲ್ಲಿ ದೇವಿ, ಶಿವ ಮತ್ತು ಶಾಸ್ತಾವು ಎಂಬಿವರನ್ನು ಪ್ರತಿಷ್ಠಿಸಲಾಗಿದೆ. ಯುವಕನಾದ ಅಯ್ಯಪ್ಪನು ಮಧ್ಯದಲ್ಲಿದ್ದು ಎಡಭಾಗದಲ್ಲಿ ದೇವಿಯನ್ನೂ ಬಲಭಾಗದಲ್ಲಿ ಶಿವನನ್ನೂ ಕೂಡಿಕೊಂಡಿರುವನು. ಈ ದೇವಾಲಯದಲ್ಲಿ ಶಬರಿಮಲೆಯ ಮಂಡಲಕಾಲದ ಮುಕ್ತಾಯದ ದಿನಗಳಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಇಲ್ಲಿ ನಡೆಯುವ ಪ್ರಮುಖ ಹಬ್ಬಗಳಲ್ಲಿ ಪಾಂಡಿಯನ್ ಮುಡಿಪ್ಪು, ತ್ರಿಕ್ಕಲ್ಯಾಣಂ ಮತ್ತು ಕುಂಭಾಭಿಷೇಕಂ ಎಂಬವು ಸೇರಿವೆ. ಕೊಲ್ಲಂ-ಪುನಲೂರು-ತೆಂಕಾಶಿರಸ್ತೆಯಲ್ಲಿ ಪಯಣಿಸುವ ಮೂಲಕ ಈ ದೇವಾಲಯವನ್ನು ತಲಪಬಹುದು.

ಸಂಪರ್ಕ

 

Connect us

ಸಹಾಯವಾಣಿ

uhh

Updated Schedule