ಭಗವಾನ್ ಅಯ್ಯಪ್ಪನ ಆರಾಧನೆಗಾಗಿಯೇ ವಿೂಸಲಾಗಿರುವ ಕೇರಳದ ದೇವಾಲಯಗಳಲ್ಲಿ ಶಬರಿಮಲೆಯ ಶ್ರೀ ಧರ್ಮಶಾಸ್ತ ದೇವಾಲಯವು ಸುಪ್ರಸಿದ್ಧವಾದುದು ಮತ್ತು ಪ್ರಧಾನವಾದುದು.ಈ ದೇವಾಲಯವು ಪಟ್ಟಣಂತಿಟ್ಟ ಜಿಲ್ಲೆಯ ಪ್ರಸಿದ್ಧವಾದ ಬೆಟ್ಟದ ತುದಿಯಲ್ಲಿದ್ದು ಸಮುದ್ರ ಮಟ್ಟದಿಂದ ಸುಮಾರು 3000 ಅಡಿ ಎತ್ತರದಲ್ಲಿದೆ.