ಪೂಜಾ ಸಮಯ

ತುಪ್ಪ ಅಭಿಷೇಕ
ಅಯ್ಯಪ್ಪ ಸ್ವಾಮಿಗೆ ಸಲ್ಲಿಸುವ ಅತ್ಯಂತ ಪ್ರಧಾನವಾದ ಸೇವೆಯೇ ತುಪ್ಪ ಅಭಿಷೇಕ. ಈ ಪೂಜಾವಿಧಿಯನ್ನು ನೆರವೇರಿಸುವುದಕ್ಕಾಗಿ ತುಪ್ಪ ತುಂಬಿಸಿದ ತೆಂಗಿನ ಕಾಯಿಗಳನ್ನು ಉಪಯೋಗಿಸಲಾಗುತ್ತದೆ. ಪ್ರಾತಃಕಾಲ ನಾಲ್ಕು ಗಂಟೆಗೆ ಆರಂಭವಾಗುವ ತುಪ್ಪ ಅಭಿಷೇಕ ಮಧ್ಯಾಹ್ನ ಪೂಜೆವರೆಗೆ (1.00p.m) ಮುಂದುವರಿಯುತ್ತದೆ. ಭಗವಾನ್ ಅಯ್ಯಪ್ಪ ಸ್ವಾಮಿಯನ್ನೂ ಉಪದೇವತೆಗಳ ಪ್ರತಿಷ್ಠೆಯನ್ನೂ ದರ್ಶನ ಮಾಡಿದ ನಂತರ ಅಯ್ಯಪ್ಪ ಭಕ್ತರ ತಂಡಗಳು ಗುರುಸ್ವಾಮಿಗಳ ಮಾರ್ಗದರ್ಶನದಲ್ಲಿ  ‘ವಿರಿ’ಯನ್ನು (ಭಕ್ತರು ತಂದ ಪೂಜಾ ಸಾಮಗ್ರಿಗಳನ್ನೆಲ್ಲ ಒಂದೆಡೆ ವ್ಯವಸ್ಥಿತವಾಗಿ ಇಡುವುದು) ಏರ್ಪಡಿಸುತ್ತಾರೆ.

ಭಕ್ತರು ತಾವು ತಂದಿರುವ ತುಪ್ಪ ತುಂಬಿದ ತೆಂಗಿನ ಕಾಯಿಗಳನ್ನು ಒಟ್ಟುಗೂಡಿಸಿ ವಿರಿಯಲ್ಲಿ  ವ್ಯವಸ್ಥಿತವಾಗಿ ಇಡುತ್ತಾರೆ.

ಸನ್ನಿಧಾನದ ಹಿಂದಿರುವ ವಿಭೂತಿಯ ಕೊಳದಲ್ಲಿ ಸ್ನಾನ ಮಾಡಿದನಂತರ ಆಯಾ ತಂಡದ  ಮುಖ್ಯಸ್ಥನಾದ ಗುರುಸ್ವಾಮಿ ತುಪ್ಪ ತುಂಬಿದ ತೆಂಗಿನ ಕಾಯಿಗಳನ್ನು ಒಡೆದು ಒಳಗಿರುವ ತುಪ್ಪವನ್ನು ಒಂದು ಪಾತ್ರೆಯಲ್ಲಿ ಶೇಖರಿಸಿ ಅದನ್ನು ಶ್ರೀಕೋವಿಲಿಗೆ ಒಪ್ಪಿಸುತ್ತಾನೆ.

ಶ್ರೀಕೋವಿಲಿನಲ್ಲಿ ಅಭಿಷೇಕ ಮಾಡಿದ ಆ ತುಪ್ಪದ ಒಂದು ಭಾಗವನ್ನು ಅರ್ಚಕನು ಭಕ್ತರಿಗೆ ಹಿಂತಿರುಗಿಸುತ್ತಾನೆ. ಶ್ರೀಕೋವಿಲ್ನಿಂದ ಸಿಗುವ ತುಪ್ಪವನ್ನು ಪವಿತ್ರವಾದ ಪ್ರಸಾದವಾಗಿ ಪರಿಗಣಿಸಿ ಭಕ್ತರು ತೆಗೆದುಕೊಂಡು ಹೋಗುತ್ತಾರೆ. ತುಪ್ಪ ತುಂಬಿಸಿದ ತೆಂಗಿನಕಾಯಿಗಳನ್ನು ಹಿಡಿದುಕೊಂಡು ಬರಲು ಸಾಧ್ಯವಾಗದ ಭಕ್ತರಿಗೆ ಪ್ರಸಾದ ರೂಪದ ತುಪ್ಪವನ್ನು ಪಡೆಯಲು ದೇವಸ್ವಂಬೋರ್ಡ್ ಬೇರೆ ಅನುಕೂಲತೆಗಳನ್ನು ವ್ಯವಸ್ಥೆಗೊಳಿಸಿದೆ. ತುಪ್ಪವು ಮನುಷ್ಯನ ಆತ್ಮದ ಪ್ರತಿರೂಪವಾಗಿದೆ. ಅಯ್ಯಪ್ಪ ಸ್ವಾಮಿಗೆ ತುಪ್ಪದ ಅಭಿಷೇಕ ಮಾಡುವುದರ ಮೂಲಕ ಆತ್ಮವು ಪರತತ್ವದಲ್ಲಿ ಲಯನಗೊಳ್ಳುತ್ತದೆ. ತುಪ್ಪವು ಜೀವಾತ್ಮ; ಅಯ್ಯಪ್ಪ ಸ್ವಾಮಿ ಪರಮಾತ್ಮ ಎಂಬ ಸಂಕಲ್ಪ ಇಲ್ಲಿನದು.

ತುಪ್ಪವೆಲ್ಲವನ್ನೂ ಬಸಿದ ತೆಂಗಿನಕಾಯಿ ಜಡ ಅಥವಾ ಮೃತದೇಹದ ಪ್ರತಿರೂಪವಾಗಿದೆ. ಆ ಕಾರಣದಿಂದಲೇ ಈ ತೆಂಗಿನ ಕಾಯಿಗಳನ್ನು ದೇವಾಲಯದ ಮುಂಭಾಗದಲ್ಲಿರುವ ದೊಡ್ಡ ಅಗ್ನಿಕುಂಡಕ್ಕೆ ಅರ್ಪಿಸಲಾಗುತ್ತದೆ.

ಪಡಿಪೂಜೆ
ಆಯ್ದ ಕೆಲವು ದಿವಸಗಳಲ್ಲಿ ಪುಷ್ಪಾಭಿಷೇಕದ ಬಳಿಕ ಪವಿತ್ರವಾದ ಹದಿನೆಂಟು ಮೆಟ್ಟಿಲುಗಳಲ್ಲಿ ನಡೆಸುವ ಪೂಜೆಯನ್ನು ‘ಮೆಟ್ಟಲು ಪೂಜೆ’ (ಪಡಿಪೂಜೆ) ಎನ್ನುತ್ತಾರೆ. ಸಾಯಂಕಾಲ ಮೇಲ್ಶಾಂತಿಯ ಸಾನ್ನಿಧ್ಯದಲ್ಲಿ ತಂತ್ರಿಗಳು ಈ ಪೂಜೆಯನ್ನು ನೆರವೇರಿಸುವರು. ರೇಷ್ಮೆ ಬಟ್ಟೆ ಮತ್ತು ಹೂಗಳಿಂದ ಮೆಟ್ಟಿಲುಗಳನ್ನು ಅಲಂಕರಿಸಿ, ಅವುಗಳಲ್ಲಿ ಪರಂಪರಾಗತ ರೀತಿಯಲ್ಲಿ ದೀಪಗಳನ್ನು ಉರಿಸಿ, ತಂತ್ರಿಗಳು ಆರತಿಯನ್ನು ಬೆಳಗುವುದರೊಂದಿಗೆ ಪೂಜೆ ಪೂರ್ತಿಗೊಳ್ಳುತ್ತದೆ. ಗಂಟೆಗಳಷ್ಟು ದೀರ್ಘವಾಗಿ ಈ ಪೂಜೆ ನಡೆಯುತ್ತದೆ.

ಉದಯಾಸ್ತಮಾನ ಪೂಜೆ
ಸೂರ್ಯೋದಯ ಮೊದಲುಗೊಂಡು ಸೂರ್ಯಾಸ್ತದವರೆಗೆ ಎಂಬ ಅರ್ಥದಲ್ಲಿ ಉದಯಾಸ್ತಮಯ ಎಂದು ಹೇಳಲಾಗುತ್ತದೆ. ಇದು ಉದಯ ಮೊದಲಾಗಿ ಅಸ್ತಮಾನದವರೆಗೆ ನಡೆಯವ ಪೂಜೆ ಎಂಬುದನ್ನು ಹೆಸರೇ ಸೂಚಿಸುತ್ತದೆ. ಪ್ರಭಾತದಿಂದ ಪ್ರದೋಷದವರೆಗೆ ಈ ಪೂಜೆ ನಡೆಯುತ್ತದೆ. (ನಿರ್ಮಾಲ್ಯ ಮೊದಲುಗೊಂಡು ಅಸ್ತಮಾನ ಪೂಜೆವರೆಗೆ). ನಿತ್ಯ ಪೂಜೆಗೆ ಹೊರತಾಗಿ ಭಕ್ತರ ಅಭಿಲಾಷೆಗನುಸರಿಸಿ ಅರ್ಚನೆ, ಅಭಿಷೇಕ ಮೊದಲಾದ ಪ್ರತ್ಯೇಕ ಪೂಜೆಗಳೂ ಭಗವಂತನ ಅನುಗ್ರಹ ಸಂಪಾದನೆಗಾಗಿ ನಡೆಯುತ್ತವೆ. ಒಟ್ಟು ಹದಿನೆಂಟು ಪೂಜೆಗಳಲ್ಲಿ ಹದಿನೈದು ಮಧ್ಯಾಹ್ನಕ್ಕೆ ಮೊದಲು ನಡೆಯುತ್ತವೆ. ನಲ್ವತ್ತೈದು ಕಲಶಾಭಿಷೇಕಗಳನ್ನೂ ನಡೆಸಲಾಗುತ್ತದೆ.

ಕಲಶಗಳು


ಸಹಸ್ರಕಲಶ
ಮನುಕುಲದ ಕ್ಷೇಮಕ್ಕಾಗಿ ಅನುಗ್ರಹಗಳನ್ನು ಅರಸುತ್ತ, ತಾಂತ್ರಿಕ ಹಾಗೂ ಆಗಮ ಶಾಸ್ತ್ರ ರೀತಿಗಳನ್ನು ಅನುಸರಿಸಿ ಹರಿಹರಪುತ್ರನಿಗೆ ಅರ್ಪಿಸುವ ಸೇವೆಯೇ ಸಹಸ್ರಕಲಶ. ಎಲ್ಲಾ ದಿವ್ಯಾತ್ಮಗಳನ್ನೂ ಅವರ ಪಾವನಕರವಾದ ಧೂಪದ ರೂಪದಲ್ಲಿಯೂ ಅಮೂಲ್ಯ ಹಾಗೂ ಅರ್ಥಮೂಲ್ಯವುಳ್ಳವುಗಳಾದ ಕಲ್ಲುಗಳಾಗಿಯೂ ಏಳು ಸಮುದ್ರಗಳಾಗಿಯೂ, ಪುಣ್ಯನದಿಗಳಾಗಿಯೂ ಪರಿಗಣಿಸಿ ಅವರನ್ನು ಚಿನ್ನ, ಬೆಳ್ಳಿ, ತಾಮ್ರ ಎಂಬಿವುಗಳಲ್ಲಿರುವ ಪವಿತ್ರ ಕಲಶಗಳಲ್ಲಿ ಆವಾಹಿಸುವ ಪಾವನವಾದ ಕರ್ಮವಿದು.

ಉತ್ಸವ ಬಲಿ
ಪಾಣಿಯನ್ನು (ಮದ್ದಳೆಯನ್ನು ಹೋಲುವ ಒಂದು ವಾದ್ಯ) ಬಾರಿಸಿಕೊಂಡು ಉತ್ಸವ ಬಲಿಯ ಕೆಲಸಗಳು ಆರಂಭಗೊಳ್ಳುತ್ತವೆ. ಉತ್ಸವ ಬಲಿಯು ಭೂತಗಣಗಳಿರುವ ಸಮರ್ಪಣೆಯಾಗಿದೆ. ಭೂತಗಣಗಳನ್ನು ಆಹ್ವಾನಿಸುವುದಕ್ಕಾಗಿ ಪಾಣಿಯನ್ನು ಬಾರಿಸಲಾಗುತ್ತದೆ. ಮುಂದೆ ಕ್ಷೇತ್ರದ ತಂತ್ರಿ ನಾಲಂಬಲದ ಸುತ್ತಲೂ ಇರುವ ಮತ್ತು ಬಲಿಕಲ್ಪುರದಲ್ಲಿರುವ ಬಲಿಕಲ್ಲುಗಳ ಮೇಲೆ ಹಾಗೂ ಸಪ್ತಮಾತೃಕೆ ಕಲ್ಲಿನ ಮೇಲೆ ಅನ್ನವನ್ನು ಚೆಲ್ಲಿದ ಬಳಿಕ ಪ್ರಧಾನ ದೇವತೆಯ ಉತ್ಸವ ಮೂರ್ತಿಯನ್ನು ಶ್ರೀಕೋವಿಲಿನಿಂದ ಹೊರಗೆ ತಂದು ಭಕ್ತರಿಗೆ ಆರಾಧಿಸಲು ಸಂದರ್ಭವನ್ನು ಒದಗಿಸುತ್ತಾರೆ.
ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ಸಂಬಂಧವಾಗಿ ಉತ್ಸವ ಬಲಿಯನ್ನು ನಡೆಸಲಾಗುತ್ತದೆ.


ಪುಷ್ಪಾಭಿಷೇಕ
ಅಯ್ಯಪ್ಪ ಸ್ವಾಮಿಯ ವಿಗ್ರಹದ ಮೇಲೆ ಮಾಡುವ ಪುಷ್ಪಗಳ ಅರ್ಚನೆಯೇ ಪುಷ್ಪಾಭಿಷೇಕ. ತಾವರೆ, ಸೇವಂತಿಗೆ, ಕಣಗಿಲೆ, ತುಳಸಿ, ಮಲ್ಲಿಗೆ, ಬಿಲ್ವಪತ್ರೆ ಎಂಬಿವುಗಳನ್ನು ಪುಷ್ಪಾಭಿಷೇಕಕ್ಕೆ ಬಳಸಿಕೊಳ್ಳುತ್ತಾರೆ. ಹೂಗಳನ್ನೂ, ಎಲೆಗಳನ್ನೂ ಪುಷ್ಪಾಭಿಷೇಕಕ್ಕೆ ಉಪಯೋಗಿಸ ಬಯಸುವ ಭಕ್ತರು ಮುಂಚಿತವಾಗಿ ಕಾದಿರಿಸಬೇಕಾಗಿದೆ. ಪುಷ್ಪಾಭಿಷೇಕವೊಂದರ ವೆಚ್ಚ ರೂ ಹತ್ತು ಸಾವಿರ.

ಅಷ್ಟಾಭಿಷೇಕ
ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ಸಲ್ಲಿಸುವ ಸೇವೆಗಳಲ್ಲಿ ಪ್ರಧಾನವಾದುದು ಅಷ್ಟಾಭಿಷೇಕ. ಭಸ್ಮ, ಹಾಲು, ಜೇನು, ಪಂಚಾಮೃತ, ಸೀಯಾಳ ನೀರು, ಚಂದನ, ಪನ್ನೀರು ಮತ್ತು ನೀರು-ಇವು ಅಷ್ಟಾಭಿಷೇಕ ಸೇವೆಯಲ್ಲಿ ಒಳಗೊಳ್ಳುವ ಎಂಟು ವಸ್ತುಗಳು. (ಹಿಂದೂ ದೇವಾಲಯಗಳಲ್ಲಿ ನಡೆಯುವ ಅಷ್ಟಾಭಿಷೇಕಗಳಲ್ಲಿ ವಿವಿಧ ಬಗೆಗಳಿವೆ. ಒಂದೊಂದು ದೇವಾಲಯದಲ್ಲಿ ಒಂದೊಂದು ರೀತಿಯನ್ನು ಅನುಸರಿಸಲಾಗುತ್ತದೆ.)

ಕಳಭಾಭಿಷೇಕ
ಪ್ರತಿಷ್ಠೆಯ ಚೈತನ್ಯವನ್ನು ಬಲಪಡಿಸುವುದಕ್ಕಾಗಿ ನಡೆಸುವ ವಿಶೇಷ ಪೂಜೆಗಳಲ್ಲಿ ಪ್ರಧಾನವಾದುದು ಕಳಭಾಭಿಷೇಕ. ಈ ಪೂಜೆಯ ಭಾಗವಾಗಿ ಮೇಲ್ಶಾಂತಿಯ ಸಾನ್ನಿಧ್ಯದಲ್ಲಿ ತಂತ್ರಿಗಳು ನಾಲಂಬಲದಲ್ಲಿಯೇ ಕಳಭಕಲಶಪೂಜೆಯನ್ನು ನಡೆಸುತ್ತಾರೆ. ಮಧ್ಯಾಹ್ನ ಪೂಜೆಯ ಭಾಗವಾಗಿ ತಂತ್ರಿಗಳು ವಿಗ್ರಹದ ಮೇಲೆ ಲೇಪಿಸಲಿರುವ ಚಂದನವನ್ನು ಸ್ವರ್ಣ ಪಾತ್ರದಲ್ಲಿಟ್ಟುಕೊಂಡು ಶ್ರೀಕೋವಿಲಿಗೆ ಪ್ರದಕ್ಷಿಣೆ ಬರುತ್ತಾರೆ. ಬಳಿಕ ಅಯ್ಯಪ್ಪ ವಿಗ್ರಹದ ಮೇಲೆ ಶ್ರೀಗಂಧವನ್ನು ಲೇಪಿಸುವುದರೊಂದಿಗೆ ಕಳಭಾಭಿಷೇಕದ ಕಾರ್ಯಕ್ರಮಗಳು ಪೂರ್ತಿಗೊಳ್ಳುತ್ತವೆ.

ಲಕ್ಷಾರ್ಚನೆ
ಅರ್ಚನೆ ಎಂದರೆ ನಾಮಜಪ ಮತ್ತು ಮಂತ್ರೋಚ್ಚಾರಣೆ. ಲಕ್ಷ ಎಂಬುದು ಸಂಖ್ಯೆಯನ್ನು ಸೂಚಿಸುತ್ತದೆ. ಒಂದು ಲಕ್ಷ ಸರ್ತಿ ಮಂತ್ರದ ರೂಪದಲ್ಲಿ ದೇವರ ನಾಮವನ್ನು ಜಪಿಸುವುದೇ ಲಕ್ಷಾರ್ಚನೆ ಎನಿಸುತ್ತದೆ.
ಮೇಲ್ಶಾಂತಿ ಮತ್ತು ಇತರ ಅರ್ಚಕರ ಸಹಾಯದೊಂದಿಗೆ ತಂತ್ರಿ ಸನ್ನಿಧಾನದಲ್ಲಿ ಲಕ್ಷಾರ್ಚನೆಯನ್ನು ನಡೆಸುತ್ತಾರೆ. ಲಕ್ಷಾರ್ಚನೆಗೆ ಅಗತ್ಯವಾದ ಬ್ರಹ್ಮಕಲಶವನ್ನು, ಮಧ್ಯಾಹ್ನ ಪೂಜೆಗೆ ಮೊದಲು, ಅಭಿಷೇಕ ನಡೆಸುವುದಕ್ಕಾಗಿ ಘೋಷಯಾತ್ರೆಯೊಂದಿಗೆ ಶ್ರೀ ಕೋವಿಲಿನ ಒಳಗೆ ಕೊಂಡೊಯ್ಯುತ್ತಾರೆ.

 

ಉತ್ಸವ ಕಾಲ : ಮಕರವಿಳಕ್ಕು ಮಹೋತ್ಸವ.

ವಿಶೇಷ ಪೂಜೆಗಳು

ಪೂಜಾಸಮಯ

ತೀರ್ಥಯಾತ್ರೆಯ ಕಾಲ

ಪೂಜಾ ಸಮಯ ಪ್ರಾತಃಕಾಲ
ಶ್ರೀಕೋವಿಲಿನ ಬಾಗಿಲು ತೆರೆಯುವುದು.
ನಿರ್ಮಾಲ್ಯ. ಅಭಿಷೇಕ:

3:00 AM

ಗಣಪತಿಹೋಮ

3:30 AM

ತುಪ್ಪ ಅಭಿಷೇಕ

03.30 a.m -07.00 a.m ವರೆಗೆ

ಉಷಪೂಜೆ

07.30 a.m ನಿಂದ

ತುಪ್ಪ ಅಭಿಷೇಕ

08.30 a.m - 11.00 a.m ವರೆಗೆ

ತುಪ್ಪ ಅಭಿಷೇಕ/ ತುಪ್ಪದೋಣಿಯ ತುಪ್ಪವನ್ನುಪಯೋಗಿಸಿ

11:10 AM

ಅಷ್ಟಾಭಿಷೇಕ(15 ಸಂಖ್ಯೆಗಳು)

11-00a.m  ನಿಂದ 11.30a.m ವರೆಗೆ

ಮಧ್ಯಾಹ್ನ ಪೂಜೆ

12:30 PM

ಗರ್ಭಗುಡಿ ಮುಚ್ಚುವುದು

1:00 PM

ಸಂಜೆ

ಗರ್ಭಗುಡಿ ತೆರೆಯುವುದು

3:00 PM

ದೀಪಾರಾಧನೆ

6:30 PM

ಪುಷ್ಪಾಭಿಷೇಕ

07.00 p.m — 9.30 p.m ವರೆಗೆ

ರಾತ್ರಿ ಪೂಜೆ

From 9:30 PM

ಹರಿವರಾಸನಂ/ ಗರ್ಭಗುಡಿಯನ್ನು ಮುಚ್ಚುವುದು

11:00 PM