ಮಾಡಬೇಕಾದುದು. ಮಾಡಬಾರದುದು

ಮಾಡಬೇಕಾದುದು

 • ಮಲೆಯ ಆರೋಹಣ ಕಾಲದಲ್ಲಿ ಹತ್ತು ಮಿನಿಟು ನಡೆದ ಬಳಿಕ ಐದು ಮಿನಿಟು ವಿಶ್ರಮಿಸಬೇಕು. ಸನ್ನಿಧಾನವನ್ನು ತಲಪಲು ಪರಂಪರಾಗತ ದಾರಿಯಾದ ಮರಕ್ಕೂಟ್ಟಂ, ಶರಂಕುತ್ತಿ, ನಡಪ್ಪಂದಲ್ ದಾರಿಯಲ್ಲಿ ಸಾಗಬೇಕು. ಹದಿನೆಂಟು ಮೆಟ್ಟಿಲುಗಳನ್ನು ತಲಪುವಲ್ಲಿ ಕ್ಯೂವನ್ನು ಪಾಲಿಸಬೇಕು ಮರುಪಯಣದಲ್ಲಿ ನಡಪ್ಪಂದಲ್ನ ಮೇಲ್ಸೇತುವೆಯನ್ನು ಉಪಯೋಗಿಸಬೇಕು.
 • ಮಲಮೂತ್ರ ವಿಸರ್ಜನೆಗಾಗಿ ಶೌಚಾಲಯಗಳನ್ನೂ ಮೂತ್ರಾಲಯ ಗಳನ್ನೂ ಬಳಸಿಕೊಳ್ಳಬೇಕು.
 • ಪಂಬೆಯಿಂದ ಸನ್ನಿಧಾನದತ್ತ ಪ್ರಯಾಣ ತೊಡಗುವ ಮೊದಲು ಜನಜಂಗುಳಿಯ ಒತ್ತಡದ ಬಗೆಗೆ ಮನವರಿಕೆ ಮಾಡಿಕೊಳ್ಳಬೇಕು
 • ಡೋಲಿಯನ್ನು ಬಳಸಿಕೊಳ್ಳುವಲ್ಲಿ ದೇವಸ್ವಂ ಕೌಂಟರಿನಲ್ಲಿ ಮಾತ್ರ ಅದರ ದರವನ್ನು ಕೊಟ್ಟು ರಸೀದಿ ಪಡೆದು ಅದನ್ನು ಜಾಗರೂಕತೆಯಿಂದ ತೆಗೆದಿಟ್ಟುಕೊಳ್ಳಬೇಕು
 • ಭದ್ರತಾ ಚೆಕ್ ಪಾಯಿಂಟ್ಗಳಲ್ಲಿ ಭದ್ರತಾ ತಪಾಸಣೆಗಾಗಿ ನೀವೇ ಸಿದ್ಧರಾಗಿರಿ.
 • ಯಾವುದೇ ನೆರವಿಗಾಗಿ ಪೋಲೀಸರನ್ನು ಸಂಪರ್ಕಿಸಬೇಕು
 • ಸಂಶಯಾಸ್ಪದವಾದ ಯಾವುದನ್ನೇ ಕಂಡರೂ ಕೂಡಲೇ ಪೊಲೀಸರಿಗೆ ತಿಳಿಸಬೇಕು.
 • ಪರವಾನಗಿ ಇರುವ ಅಂಗಡಿಗಳಿಂದ ಮಾತ್ರವೇ ಖಾದ್ಯ ವಸ್ತುಗಳನ್ನು ಖರೀದಿಸಬೇಕು
 • ಪಂಬ, ಸನ್ನಿಧಾನ, ಮಲೆಯ ಆರೋಹಣದ ದಾರಿ, ಎಲ್ಲವನ್ನೂ ನಿರ್ಮಲವಾಗಿರುವಂತೆ ನೋಡಿಕೊಳ್ಳಬೇಕು
 • ನಿಗದಿಪಡಿಸಿದ ಪಾರ್ಕಿಂಗ್ ಸ್ಲಾಟ್ಗಳಲ್ಲಿ ಮಾತ್ರ ವಾಹನಗಳನ್ನು ನಿಲ್ಲಿಸಿ ತ್ಯಾಜ್ಯಗಳನ್ನು ಅದಕ್ಕಾಗಿ ವಿೂಸಲಾಗಿರಿಸಿದ ತ್ಯಾಜ್ಯ ಪೆಟ್ಟಿಗೆಗಳಲ್ಲಿ ಹಾಕಿರಿ
 • ಓಕ್ಸಿಜನ್ ಪಾರ್ಲರ್ ಮತ್ತು ಮೆಡಿಕಲ್ ಸೆಂಟರುಗಳ ಸೌಕರ್ಯ ಗಳನ್ನು ಅವಶ್ಯಕತೆಗೆ ಅನುಸಾರವಾಗಿ ಉಪಯೋಗಿಸಿಕೊಳ್ಳಬೇಕು.
 • ಮಕ್ಕಳು, ವೃದ್ಧರು ಮತ್ತು ಮಾಳಿಕಪ್ಪುರಗಳ (ಹುಡುಗಿಯರ) ಕುತ್ತಿಗೆಯಲ್ಲಿ ವಿಳಾಸ, ದೂರವಾಣಿ ಸಂಖ್ಯೆಗಳನ್ನು ಬರೆದ ಗುರುತಿನ ಕಾರ್ಡನ್ನು ನೇತು ಹಾಕಿರಿ
 • ಗುಂಪುಗಳು ಅಥವಾ ಸ್ನೇಹಿತರಿಂದ ಬೇರ್ಪಟ್ಟು ಹೋದ ಸಂದರ್ಭಗಳಲ್ಲಿ ಪೊಲೀಸು ನೆರವು ಪೋಸ್ಟುಗಳ ಸಹಾಯವನ್ನು ಪಡೆಯಿರಿ.
ಮಾಡಬಾರದ್ದು
 • ದೇವಾಲಯದ ಪರಿಸರದಲ್ಲಿ ಮೊಬೈಲ್ ಫೋನ್ ಬಳಸಬೇಡಿ.
 • ಪಂಬ, ಸನ್ನಿಧಾನ ಹಾಗೂ ಕಾಡುದಾರಿಯಲ್ಲಿ ಹೊಗೆಬತ್ತಿ ಸೇದಬೇಡಿರಿ.
 • ಮದ್ಯವನ್ನೂ ಉತ್ತೇಜಕ ಔಷಧಿಗಳನ್ನೂ ಸೇವಿಸಬೇಡಿರಿ.
 • ಕ್ಯೂವನ್ನು ವಿೂರಿ ಹೋಗಲು ಪ್ರಯತ್ನಿಸಬೇಡಿರಿ.
 • ಸರದಿ ಸಾಲಿನಲ್ಲಿ ನಿಂತಿರುವಾಗ ಒತ್ತಡ ಹಾಕಬೇಡಿರಿ
 • ಶಸ್ತ್ರಾಸ್ತ್ರಗಳು ಅಥವಾ ಸ್ಫೋಟಕ ವಸ್ತುಗಳನ್ನು ಸಾಗಿಸಬೇಡಿರಿ.
 • ಅನಧಿಕೃತವಾದ ಮಾರಾಟಗಾರರನ್ನು ಪ್ರೋತ್ಸಾಹಿಸಬೇಡಿರಿ
 • ತೆರೆದ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡಬೇಡಿರಿ.
 • ಯಾವುದೇ ಸೇವೆಗೆ ಹೆಚ್ಚುವರಿ ಪಾವತಿ ಮಾಡಬೇಡಿರಿ.
 • ಯಾವುದೇ ಸಹಾಯಕ್ಕಾಗಿ ಪೋಲೀಸರನ್ನು ಸಂಪರ್ಕಿಸಲು ಹಿಂದೇಟು ಹಾಕಬೇಡಿರಿ.
 • ತ್ಯಾಜ್ಯಗಳನ್ನು ತ್ಯಾಜ್ಯ ತೊಟ್ಟಿಗಳಲ್ಲದೆ ಬೇರೆಲ್ಲಿಯೂ ಎಸೆಯಬೇಡಿರಿ
 • ಪದಿನೆಟ್ಟಾಂ ಪಡಿಯಲ್ಲಿ ತೆಂಗಿನ ಕಾಯಿ ಒಡೆಯಬೇಡಿರಿ.
 • ಪದಿನೆಟ್ಟಾಂ ಪಡಿಯ ಎರಡೂ ಬದಿಗಳಲ್ಲಿ ಗೊತ್ತುಪಡಿಸಿದ ಸ್ಥಳಗಳನ್ನು ಹೊರತುಪಡಿಸಿ ಬೇರೆಲ್ಲಿಯೂ ತೆಂಗಿನಕಾಯಿಯನ್ನು ಒಡೆಯಬೇಡಿರಿ.
 • ಪದಿನೆಟ್ಟಾಂ ಪಡಿಯನ್ನು ಏರುವಾಗ ಮಂಡಿಯೂರಬೇಡಿರಿ.
 • ಮರುಪಯಣದಲ್ಲಿ ನಡಪ್ಪಂದಲ್ ಫ್ಲೈಓವರ್ ಹೊರತುಪಡಿಸಿ ಬೇರಾವ ಮಾರ್ಗವನ್ನೂ ಬಳಸಬೇಡಿರಿ
 • ಸನ್ನಿಧಾನದ ಅಂಗಣದಲ್ಲಿಯೋ ತಂತ್ರಿನಡೆಯಲ್ಲಿಯೋ ವಿಶ್ರಾಂತಿ ಪಡೆಯಬೇಡಿರಿ.
 • ವಿರಿ ಇಡುವ ಸ್ಥಳಗಳಾದ ನಡಪ್ಪಂದಲ್ ಮತ್ತು ಕೆಳಗಿನ ಪ್ರಾಂಗಣವನ್ನು ನಡೆಯುವ ದಾರಿಯಾಗಿ ಬಳಸಬೇಡಿರಿ.
ಭದ್ರತೆ
 • ಪಟಾಕಿಗಳನ್ನು ನಿಷೇಧಿಸಲಾಗಿದೆ.
 • ಶಸ್ತ್ರಾಸ್ತ್ರಗಳನ್ನು ಒಯ್ಯಲು ಅನುಮತಿ ಇಲ್ಲ
 • ಅಡುಗೆ ಅನಿಲ, ಸ್ಟೌ ಇವುಗಳನ್ನು ಸನ್ನಿಧಾನದಲ್ಲಿ ಉಪಯೋಗಿಸುವಂತಿಲ್ಲ
 • ಬೆಂಕಿ ಉರಿಸಿದರೆ ಅಗತ್ಯ ಪೂರೈಸಿದೊಡನೆ ಅದನ್ನು ನಂದಿಸಬೇಕು
 • ಪದಿನೆಟ್ಟಾಂಪಡಿ ಏರುವುದರ ಮೊದಲು ನಿಮ್ಮನ್ನು ಮತ್ತು ನಿಮ್ಮ ಸಾಮಾಗ್ರಿಗಳನ್ನು ಭದ್ರತಾ ತಪಾಸಣೆಗೆ ಒಳಪಡಿಸಿರಿ.