ಸಾಮಾನ್ಯ ಸೂಚನೆಗಳು

ಮಾಡಬೇಕಾದುದು

  • ಮಲೆಯ ಆರೋಹಣ ಕಾಲದಲ್ಲಿ ಹತ್ತು ಮಿನಿಟು ನಡೆದ ಬಳಿಕ ಐದು ಮಿನಿಟು ವಿಶ್ರಮಿಸಬೇಕು. ಸನ್ನಿಧಾನವನ್ನು ತಲಪಲು ಪರಂಪರಾಗತ ದಾರಿಯಾದ ಮರಕ್ಕೂಟ್ಟಂ, ಶರಂಕುತ್ತಿ, ನಡಪ್ಪಂದಲ್ ದಾರಿಯಲ್ಲಿ ಸಾಗಬೇಕು. ಹದಿನೆಂಟು ಮೆಟ್ಟಿಲುಗಳನ್ನು ತಲಪುವಲ್ಲಿ ಕ್ಯೂವನ್ನು ಪಾಲಿಸಬೇಕು ಮರುಪಯಣದಲ್ಲಿ ನಡಪ್ಪಂದಲ್ನ ಮೇಲ್ಸೇತುವೆಯನ್ನು ಉಪಯೋಗಿಸಬೇಕು.
  • ಮಲಮೂತ್ರ ವಿಸರ್ಜನೆಗಾಗಿ ಶೌಚಾಲಯಗಳನ್ನೂ ಮೂತ್ರಾಲಯ ಗಳನ್ನೂ ಬಳಸಿಕೊಳ್ಳಬೇಕು.
  • ಪಂಬೆಯಿಂದ ಸನ್ನಿಧಾನದತ್ತ ಪ್ರಯಾಣ ತೊಡಗುವ ಮೊದಲು ಜನಜಂಗುಳಿಯ ಒತ್ತಡದ ಬಗೆಗೆ ಮನವರಿಕೆ ಮಾಡಿಕೊಳ್ಳಬೇಕು
  • ಡೋಲಿಯನ್ನು ಬಳಸಿಕೊಳ್ಳುವಲ್ಲಿ ದೇವಸ್ವಂ ಕೌಂಟರಿನಲ್ಲಿ ಮಾತ್ರ ಅದರ ದರವನ್ನು ಕೊಟ್ಟು ರಸೀದಿ ಪಡೆದು ಅದನ್ನು ಜಾಗರೂಕತೆಯಿಂದ ತೆಗೆದಿಟ್ಟುಕೊಳ್ಳಬೇಕು
  • ಭದ್ರತಾ ಚೆಕ್ ಪಾಯಿಂಟ್ಗಳಲ್ಲಿ ಭದ್ರತಾ ತಪಾಸಣೆಗಾಗಿ ನೀವೇ ಸಿದ್ಧರಾಗಿರಿ.
  • ಯಾವುದೇ ನೆರವಿಗಾಗಿ ಪೋಲೀಸರನ್ನು ಸಂಪರ್ಕಿಸಬೇಕು
  • ಸಂಶಯಾಸ್ಪದವಾದ ಯಾವುದನ್ನೇ ಕಂಡರೂ ಕೂಡಲೇ ಪೊಲೀಸರಿಗೆ ತಿಳಿಸಬೇಕು.
  • ಪರವಾನಗಿ ಇರುವ ಅಂಗಡಿಗಳಿಂದ ಮಾತ್ರವೇ ಖಾದ್ಯ ವಸ್ತುಗಳನ್ನು ಖರೀದಿಸಬೇಕು
  • ಪಂಬ, ಸನ್ನಿಧಾನ, ಮಲೆಯ ಆರೋಹಣದ ದಾರಿ, ಎಲ್ಲವನ್ನೂ ನಿರ್ಮಲವಾಗಿರುವಂತೆ ನೋಡಿಕೊಳ್ಳಬೇಕು
  • ನಿಗದಿಪಡಿಸಿದ ಪಾರ್ಕಿಂಗ್ ಸ್ಲಾಟ್ಗಳಲ್ಲಿ ಮಾತ್ರ ವಾಹನಗಳನ್ನು ನಿಲ್ಲಿಸಿ ತ್ಯಾಜ್ಯಗಳನ್ನು ಅದಕ್ಕಾಗಿ ವಿೂಸಲಾಗಿರಿಸಿದ ತ್ಯಾಜ್ಯ ಪೆಟ್ಟಿಗೆಗಳಲ್ಲಿ ಹಾಕಿರಿ
  • ಓಕ್ಸಿಜನ್ ಪಾರ್ಲರ್ ಮತ್ತು ಮೆಡಿಕಲ್ ಸೆಂಟರುಗಳ ಸೌಕರ್ಯ ಗಳನ್ನು ಅವಶ್ಯಕತೆಗೆ ಅನುಸಾರವಾಗಿ ಉಪಯೋಗಿಸಿಕೊಳ್ಳಬೇಕು.
  • ಮಕ್ಕಳು, ವೃದ್ಧರು ಮತ್ತು ಮಾಳಿಕಪ್ಪುರಗಳ (ಹುಡುಗಿಯರ) ಕುತ್ತಿಗೆಯಲ್ಲಿ ವಿಳಾಸ, ದೂರವಾಣಿ ಸಂಖ್ಯೆಗಳನ್ನು ಬರೆದ ಗುರುತಿನ ಕಾರ್ಡನ್ನು ನೇತು ಹಾಕಿರಿ
  • ಗುಂಪುಗಳು ಅಥವಾ ಸ್ನೇಹಿತರಿಂದ ಬೇರ್ಪಟ್ಟು ಹೋದ ಸಂದರ್ಭಗಳಲ್ಲಿ ಪೊಲೀಸು ನೆರವು ಪೋಸ್ಟುಗಳ ಸಹಾಯವನ್ನು ಪಡೆಯಿರಿ.
ಮಾಡಬಾರದ್ದು
  • ದೇವಾಲಯದ ಪರಿಸರದಲ್ಲಿ ಮೊಬೈಲ್ ಫೋನ್ ಬಳಸಬೇಡಿ.
  • ಪಂಬ, ಸನ್ನಿಧಾನ ಹಾಗೂ ಕಾಡುದಾರಿಯಲ್ಲಿ ಹೊಗೆಬತ್ತಿ ಸೇದಬೇಡಿರಿ.
  • ಮದ್ಯವನ್ನೂ ಉತ್ತೇಜಕ ಔಷಧಿಗಳನ್ನೂ ಸೇವಿಸಬೇಡಿರಿ.
  • ಕ್ಯೂವನ್ನು ವಿೂರಿ ಹೋಗಲು ಪ್ರಯತ್ನಿಸಬೇಡಿರಿ.
  • ಸರದಿ ಸಾಲಿನಲ್ಲಿ ನಿಂತಿರುವಾಗ ಒತ್ತಡ ಹಾಕಬೇಡಿರಿ
  • ಶಸ್ತ್ರಾಸ್ತ್ರಗಳು ಅಥವಾ ಸ್ಫೋಟಕ ವಸ್ತುಗಳನ್ನು ಸಾಗಿಸಬೇಡಿರಿ.
  • ಅನಧಿಕೃತವಾದ ಮಾರಾಟಗಾರರನ್ನು ಪ್ರೋತ್ಸಾಹಿಸಬೇಡಿರಿ
  • ತೆರೆದ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡಬೇಡಿರಿ.
  • ಯಾವುದೇ ಸೇವೆಗೆ ಹೆಚ್ಚುವರಿ ಪಾವತಿ ಮಾಡಬೇಡಿರಿ.
  • ಯಾವುದೇ ಸಹಾಯಕ್ಕಾಗಿ ಪೋಲೀಸರನ್ನು ಸಂಪರ್ಕಿಸಲು ಹಿಂದೇಟು ಹಾಕಬೇಡಿರಿ.
  • ತ್ಯಾಜ್ಯಗಳನ್ನು ತ್ಯಾಜ್ಯ ತೊಟ್ಟಿಗಳಲ್ಲದೆ ಬೇರೆಲ್ಲಿಯೂ ಎಸೆಯಬೇಡಿರಿ
  • ಪದಿನೆಟ್ಟಾಂ ಪಡಿಯಲ್ಲಿ ತೆಂಗಿನ ಕಾಯಿ ಒಡೆಯಬೇಡಿರಿ.
  • ಪದಿನೆಟ್ಟಾಂ ಪಡಿಯ ಎರಡೂ ಬದಿಗಳಲ್ಲಿ ಗೊತ್ತುಪಡಿಸಿದ ಸ್ಥಳಗಳನ್ನು ಹೊರತುಪಡಿಸಿ ಬೇರೆಲ್ಲಿಯೂ ತೆಂಗಿನಕಾಯಿಯನ್ನು ಒಡೆಯಬೇಡಿರಿ.
  • ಪದಿನೆಟ್ಟಾಂ ಪಡಿಯನ್ನು ಏರುವಾಗ ಮಂಡಿಯೂರಬೇಡಿರಿ.
  • ಮರುಪಯಣದಲ್ಲಿ ನಡಪ್ಪಂದಲ್ ಫ್ಲೈಓವರ್ ಹೊರತುಪಡಿಸಿ ಬೇರಾವ ಮಾರ್ಗವನ್ನೂ ಬಳಸಬೇಡಿರಿ
  • ಸನ್ನಿಧಾನದ ಅಂಗಣದಲ್ಲಿಯೋ ತಂತ್ರಿನಡೆಯಲ್ಲಿಯೋ ವಿಶ್ರಾಂತಿ ಪಡೆಯಬೇಡಿರಿ.
  • ವಿರಿ ಇಡುವ ಸ್ಥಳಗಳಾದ ನಡಪ್ಪಂದಲ್ ಮತ್ತು ಕೆಳಗಿನ ಪ್ರಾಂಗಣವನ್ನು ನಡೆಯುವ ದಾರಿಯಾಗಿ ಬಳಸಬೇಡಿರಿ.
ಭದ್ರತೆ
  • ಪಟಾಕಿಗಳನ್ನು ನಿಷೇಧಿಸಲಾಗಿದೆ.
  • ಶಸ್ತ್ರಾಸ್ತ್ರಗಳನ್ನು ಒಯ್ಯಲು ಅನುಮತಿ ಇಲ್ಲ
  • ಅಡುಗೆ ಅನಿಲ, ಸ್ಟೌ ಇವುಗಳನ್ನು ಸನ್ನಿಧಾನದಲ್ಲಿ ಉಪಯೋಗಿಸುವಂತಿಲ್ಲ
  • ಬೆಂಕಿ ಉರಿಸಿದರೆ ಅಗತ್ಯ ಪೂರೈಸಿದೊಡನೆ ಅದನ್ನು ನಂದಿಸಬೇಕು
  • ಪದಿನೆಟ್ಟಾಂಪಡಿ ಏರುವುದರ ಮೊದಲು ನಿಮ್ಮನ್ನು ಮತ್ತು ನಿಮ್ಮ ಸಾಮಾಗ್ರಿಗಳನ್ನು ಭದ್ರತಾ ತಪಾಸಣೆಗೆ ಒಳಪಡಿಸಿರಿ.

 

 

ಶಬರಿಮಲೆಯನ್ನು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತವನ್ನಾಗಿ ಮಾಡಲು ‘ಮಿಷನ್ ಗ್ರೀನ್ ಶಬರಿಮಲೆ’

ಶಬರಿಮಲೆ ತೀರ್ಥಯಾತ್ರೆಗೆ ಹೊಂದಿಕೊಂಡು ಶಬರಿಮಲೆಯನ್ನೂ ಪರಿಸರ ಪ್ರದೇಶವನ್ನೂ ಪ್ಲಾಸ್ಟಿಕ್ ಮುಕ್ತವಾಗಿಸಬೇಕು ಎಂಬ ಗುರಿಯೊಂದಿಗೆ ‘ಮಿಷನ್ ಗ್ರೀನ್ ಶಬರಿಮಲೆ’ ಎಂಬ ಯೋಜನೆ ರೂಪುಗೊಂಡಿದೆ. ಪಟ್ಟಣಂ ತಿಟ್ಟ ಜಿಲ್ಲಾಡಳಿತದ ನೇತೃತ್ವದಲ್ಲಿ ಜಾರಿಗೆ ತರುವ ಮಿಷನ್ ಗ್ರೀನ್ ಶಬರಿಮಲೆಗಾಗಿ ಬಗೆಬಗೆಯ ಪ್ರಚಾರ ಅಭಿಯಾನಗಳನ್ನು ಶುಚಿತ್ವ ಮಿಷನ್ ಕೈಗೊಳ್ಳುತ್ತದೆ. ಶಬರಿಮಲೆಯನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡುವುದಕ್ಕೆ ಶುಚಿತ್ವ ಮಿಷನ್ ನೇತೃತ್ವದಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ದೇವಸ್ವಂ ಮಂಡಳಿ, ಅರಣ್ಯ ಇಲಾಖೆ, ಕುಟುಂಬ ಶ್ರೀ ಮಿಷನ್, ಪೊಲೀಸ್, ಮಾಹಿತಿ ಸಾರ್ವಜನಿಕ ಸಂಪರ್ಕ ಇಲಾಖೆ ಎಂಬೀ ವಿಭಾಗಗಳ ಸಹಕಾರದೊಂದಿಗೆ ಮಿಷನ್ ಗ್ರೀನ್ ಶಬರಿಮಲೆ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

ಶಬರಿಮಲೆಯನ್ನೂ ಪರಿಸರ ಪ್ರದೇಶಗಳನ್ನೂ ಪ್ಲಾಸ್ಟಿಕ್ ಮುಕ್ತಗೊಳಿಸುವುದಕ್ಕಾಗಿ ನಡೆಸುವ ಪ್ರಚಾರದ ಅಂಗವಾಗಿ, ತೀರ್ಥ ಯಾತ್ರಿಕರಿಗೆ ಪ್ಲಾಸ್ಟಿಕ್ ಚೀಲಗಳ ಬದಲಿಗೆ ಪ್ಲಾಸ್ಟಿಕ್ ತ್ಯಾಜ್ಯಗಳ ಕುರಿತು ಅರಿವು ಮೂಡಿಸುವ ಸಂದೇಶಗಳನ್ನು ಹೊಂದಿರುವ 50 ಸಾವಿರದಷ್ಟು ಬಟ್ಟೆಯ ಚೀಲಗಳನ್ನು ವಿತರಿಸಲಾಗುತ್ತದೆ. ನಿಲಯ್ಕಲ್ ಬಸ್ ಕ್ಯಾಂಪಿನಲ್ಲೂ ಚೆಂಗನ್ನೂರು ರೈಲ್ವೇ ಸ್ಟೇಶನ್ನಲ್ಲೂ ಸ್ಟಾಲ್ಗಳ ಮೂಲಕ ಯಾತ್ರಿಕರಿಗೆ ಬಟ್ಟೆಯ ಚೀಲಗಳನ್ನು ವಿತರಿಸುತ್ತಾರೆ. ಪಂಪಾನದಿಯ ನೀರಿನಲ್ಲಿ ಯಾತ್ರಿಕರು ತಮ್ಮ ಬಟ್ಟೆಗಳನ್ನು ಹರಿಯಬಿಡುವುದನ್ನು ತಡೆಯುವುದಕ್ಕಾಗಿ ಪಂಪಾ ನದಿಯ ಸ್ನಾನಘಟ್ಟಗಳಲ್ಲಿ ಗ್ರೀನ್ ಗಾರ್ಡ್ಸ್ ಕಾರ್ಯಕರ್ತರು ದಿನದ 24 ಗಂಟೆಗಳೂ ಶಿಫ್ಟ್ ವ್ಯವಸ್ಥೆಯಲ್ಲಿ ಕಾರ್ಯನಿರತರಾಗಿರುತ್ತಾರೆ. ಶಬರಿಮಲೆ ನೈರ್ಮಲ್ಯ ಸೊಸೈಟಿಯ ಅಧೀನದಲ್ಲಿರುವ ಸದಸ್ಯರು ಗ್ರೀನ್ ಗಾರ್ಡ್ಸ್ ಆಗಿ ಕಾರ್ಯವೆಸಗುತ್ತಾರೆ. ಜಿಲ್ಲೆಯ ವಿವಿಧ ಕಾಲೇಜುಗಳ ಎನ್.ಎಸ್.ಎಸ್. ಸ್ವಯಂಸೇವಕರು ಮಿಷನ್ ಗ್ರೀನ್ ಶಬರಿಮಲೆ ಯೋಜನೆಯಲ್ಲಿ ಪಾಲುಗೊಳ್ಳುತ್ತಾರೆ. ಳಾಹ ಎಂಬಲ್ಲಿಂದ ಪಂಬದವರೆಗೂ ಕಣಮಲೆಯಿಂದ ಳಾಹದ ವರೆಗೂ ಹೋಗುವ ರಸ್ತೆಯ ಉದ್ದಕ್ಕೂ ಕಾಣಸಿಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಪರಿಸರ ಕಾವಲುಗಾರರ ನೆರವಿನೊಂದಿಗೆ ಸಂಗ್ರಹಿಸಲಾಗುತ್ತದೆ. ನಿಲಯ್ಕಲ್, ಪಂಬ ಎಂಬ ಸ್ಥಳಗಳಲ್ಲಿರುವ ಸಾವಯವೇತರ ತ್ಯಾಜ್ಯಗಳನ್ನು ಶುಚಿತ್ವ ಮಿಷನ್ನ ನೇತೃತ್ವದಲ್ಲಿ ಸಂಗ್ರಹಿಸುತ್ತಾರೆ. ಹಾಗೆ ಶೇಖರಿಸಿದ ತ್ಯಾಜ್ಯಗಳನ್ನು ತಿರುವಲ್ಲ ಕೇಂದ್ರವಾಗಿರುವ ಖಾಸಗಿ ಸಂಸ್ಥೆಯೊಂದು ಸಂಸ್ಕರಿಸುತ್ತದೆ. ನಿಲಯ್ಕಲ್, ಪಂಬ ಎಂಬೆಡೆಗಳಲ್ಲಿ ಆರು ದೊಡ್ಡ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಪೆಟ್ಟಿಗೆಗಳನ್ನು ಸ್ಥಾಪಿಸಿದ್ದಾರೆ. ಪ್ಲಾಸ್ಟಿಕ್ ಬಾಟಲಿಗಳು ಮತ್ತು ಚೀಲಗಳನ್ನು ಹಾಕಿಡುವುದಕ್ಕಾಗಿ ಈ ಪೆಟ್ಟಿಗೆಗಳನ್ನು ಇರಿಸುವುದಾಗಿದೆ. ಪಂಬ, ನಿಲಯ್ಕಲ್, ಪಂದಳಂ ಎಂಬೆಡೆಗಳಲ್ಲಾಗಿ ನೂರಕ್ಕೂ ಹೆಚ್ಚು ಉಕ್ಕಿನ ಪೆಟ್ಟಿಗೆಗಳನ್ನು(Steel Bin) ಸಾವಯವೇತರ ತ್ಯಾಜ್ಯಗಳನ್ನು ಸಂಗ್ರಹಿಸುವುದಕ್ಕಾಗಿ ಇಡಲಾಗಿದೆ. ಪಂಪಾ ನದಿಯಲ್ಲಿ ಬಟ್ಟೆಗಳನ್ನು ಎಸೆಯುವುದು ಶಬರಿಮಲೆಯ ವ್ರತಾಚರಣೆಗೆ ವಿರುದ್ಧವಾದುದೆಂದೂ ಶಬರಿಮಲೆಯನ್ನೂ ಕಾಡು ದಾರಿಯನ್ನೂ ಪ್ಲಾಸ್ಟಿಕ್ ಮುಕ್ತವನ್ನಾಗಿ ಸಂರಕ್ಷಿಸಬೇಕೆಂದೂ ವಿವಿಧ ಭಾಷೆಗಳಲ್ಲಿ ಬರೆದ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ಶಬರಿಮಲೆಯ ವಿಶೇಷ ದಿನಗಳನ್ನು ಗುರುತಿಸಿದ ‘ಪೋಕೆಟ್ ಕಾರ್ಡು’ಗಳನ್ನು ಜಿಲ್ಲೆಯಾದ್ಯಂತ ವಿವಿಧ ಕೇಂದ್ರಗಳಲ್ಲಿ ತೀರ್ಥಯಾತ್ರಿಕರಿಗೆ ವಿತರಿಸಲಾಗುತ್ತದೆ. ರೈಲ್ವೆ ಮೂಲಕ ತೀರ್ಥಯಾತ್ರೆಗೆ ಬರುವ ಭಕ್ತರ ಗಮನಕ್ಕೆ ತರುವ ಸಲುವಾಗಿ ಚೆಂಗನ್ನೂರು ರೈಲ್ವೆ ಸ್ಟೇಶನ್ನಲ್ಲಿ ಕನ್ನಡ, ತೆಲುಗು, ತಮಿಳು ಎಂಬೀ ಮೂರು ಭಾಷೆಗಳಲ್ಲಿ, ಯಾವುದೇ ರೈಲ್ವೇ ಘೋಷಣೆಗೆ ಮೊದಲು ಈ ಜಾಗೃತಿಯ ಸಂದೇಶಗಳನ್ನು ಸಾರಲಾಗುತ್ತದೆ.

 

 

ಶಬರಿಮಲೆಯಲ್ಲಿ ಸಂಪೂರ್ಣ ಶುಚಿತ್ವವನ್ನು ಸಾಧಿಸಲಿರುವ ಯೋಜನೆಯೇ ‘ಪುಣ್ಯಂ ಪೂಂಗಾವನಂ’

‘ಪುಣ್ಯಂ ಪೂಂಗಾವನಂ’ ಯೋಜನೆಯ ಲಕ್ಷ್ಯ ಶಬರಿಮಲೆ ಹಾಗೂ ಪರಿಸರವನ್ನು ಶುಚಿತ್ವ ಪೂರ್ಣ ಪ್ರದೇಶವನ್ನಾಗಿ ಮಾಡುವುದಾಗಿದೆ. ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಬರುವ ತೀರ್ಥಯಾತ್ರಿಕರ ಸಹಕಾರದೊಂದಿಗೆ ಕರ್ತವ್ಯಕ್ಕೆ ನೇಮಿಸಲ್ಪಟ್ಟಿರುವ ದೇವಸ್ವಂ, ಪೊಲೀಸ್, ಇತರ ಇಲಾಖೆಗಳ ಉದ್ಯೋಗಸ್ಥರನ್ನೂ ಒಳಗೊಳ್ಳಿಸಿಕೊಂಡು ಈ ಪುಣ್ಯಂ ಪೂಂಗಾವನಂ ಎಂಬ ಶುಚೀಕರಣ ಕಾರ್ಯಗಳನ್ನು ನಡೆಸಲಾಗುತ್ತದೆ. ಎಂಟು ವರ್ಷಗಳಿಗೂ ಹೆಚ್ಚು ಕಾಲ ಮಂಡಲ ಸಮಯಗಳಲ್ಲಿ ಸನ್ನಿಧಾನವನ್ನೂ ಪರಿಸರವನ್ನೂ ದಿನಾ ಬೆಳಗ್ಗೆ ಗಂಟೆ ಒಂಬತ್ತರಿಂದ 10ರ ವರೆಗೆ ಶುಚಿಗೊಳಿಸುತ್ತಾ ಬರಲಾಗುತ್ತದೆ.

ವಿವಿಧ ಚಟುವಟಿಕೆಗಳ ಮೂಲಕ ಶುಚೀಕರಣ ಕಾರ್ಯ ನಡೆಸುವುದರಲ್ಲಿ ಅಯ್ಯಪ್ಪ ಭಕ್ತರೂ ಪಾಲುಗಾರರಾಗಬೇಕು ಎಂಬುದು ‘ಪುಣ್ಯಂ ಪೂಂಗಾವನಂ’ ಎಂಬ ಯೋಜನೆಯ ಗುರಿ. ಶಬರಿಮಲೆಯ ದರ್ಶನಕ್ಕಾಗಿಯೂ ಸೇವಾಕಾರ್ಯಗಳಿಗಾಗಿಯೂ ಬರುವ ಪ್ರಸಿದ್ಧ ವ್ಯಕ್ತಿಗಳೂ ದಿನಾ ನಡೆಯುವ ಶುಚೀಕರಣ ಕೆಲಸಗಳಲ್ಲಿ ಭಾಗಿಗಳಾಗುತ್ತಾರೆ. ಕೈ ಗ್ಲೌಸುಗಳು, ಕಾಲಿಗಿರುವ ಸಾಕ್ಸ್ಗಳು ಸೇರಿದಂತೆ ನೈರ್ಮಲ್ಯ ಸಾಧನಗಳೊಂದಿಗೆ ಶುಚೀಕರಣ ಕೆಲಸ ನಡೆಯುತ್ತದೆ. ಶಬರಿಮಲೆಯಿಂದ ಎಲ್ಲಾ ವಿಧದ ತ್ಯಾಜ್ಯಗಳನ್ನು ಹೊರಹಾಕುವುದು ಇಲ್ಲಿನ ಪರಮ ಲಕ್ಷ್ಯ. ಸನ್ನಿಧಾನವನ್ನೂ ಪರಿಸರವನ್ನೂ ಸ್ವಚ್ಛವಾಗಿಟ್ಟು ಕಾಪಾಡಿಕೊಳ್ಳಬೇಕು ಎಂಬ ಗುರಿಯೊಂದಿಗೆ 2011ರಲ್ಲಿ ಐ.ಜಿ.ಪಿ. ವಿಜಯನ್ ಅವರು ‘ಬೆಳಗ್ಗೆ ಒಂದು ಗಂಟೆ ಕಾಲ ಶುಚೀಕರಣ ಕಾರ್ಯಕ್ರಮ’ ಎಂಬ ಆಶಯವನ್ನು ಜಾರಿಗೊಳಿಸಿದ್ದಾರೆ.

ಅಯ್ಯಪ್ಪ ಸೇವಾ ಸಂಘದೊಂದಿಗೆ ಸಹಕರಿಸಿ ಶುಚೀಕರಣಕ್ಕಾಗಿ ಪಂಬ, ನಿಲಯ್ಕಲ್, ಸನ್ನಿಧಾನ ಎಂಬೀ ಎಡೆಗಳಲ್ಲಿ 900ಕ್ಕೂ ಹೆಚ್ಚು ಮಂದಿ ವಿಶುದ್ಧಿ ಸೇವಾ ಸದಸ್ಯರನ್ನು ಪಟ್ಟಣಂತಿಟ್ಟ ಜಿಲ್ಲಾ ಆಡಳಿತ ಮಂಡಳಿ ನಿಯೋಜಿಸಿದೆ. ಇವರೆಲ್ಲರೂ ಸೇವಾ ಮನೋಭಾವ ಹೊಂದಿರುವ ತಮಿಳುನಾಡಿನ ಮಂದಿ. ಇವರಲ್ಲಿ ಶುಚೀಕರಣಕ್ಕಾಗಿ ಸನ್ನಿಧಾನದಲ್ಲಿ 300 ಮಂದಿಯನ್ನು, ಪಂಬೆಯಲ್ಲಿ 205 ಮಂದಿಯನ್ನು, ನಿಲಯ್ಕಲ್ನಲ್ಲಿ 360 ಮಂದಿಯನ್ನೂ, ಪಂದಳಂನಲ್ಲಿ 25 ಮಂದಿಯನ್ನು, ಕುಳನಡದಲ್ಲಿ 10 ಮಂದಿಯನ್ನು ನಿಯೋಜಿಸಲಾಗಿದೆ.
ಮಿಷನ್ ಗ್ರೀನ್ ಶಬರಿಮಲೆಯು ಶುಚೀಕರಣ ಸೇನೆಯ ನೇತೃತ್ವದಲ್ಲಿ ಪ್ಲಾಸ್ಟಿಕ್ನ ಉಪಯೋಗವನ್ನು ತಡೆಯುವ ಮತ್ತು ಪಂಪಾ ನದಿಯನ್ನು ತ್ಯಾಜ್ಯ ಮುಕ್ತಗೊಳಿಸುವ ಉದ್ದೇಶದಿಂದ ಜಾಗೃತಿ ಅಭಿಯಾನವನ್ನು ನಡೆಸುತ್ತಿದೆ. ಶುಚೀಕರಣ ಸೇನೆಯ ಸದಸ್ಯರ ಸೇವೆಯು ದಿನದ 24 ಗಂಟೆಗಳ ಕಾಲವೂ ಲಭಿಸುತ್ತದೆ.