ನಿಲಯ್ಕಲ್ ಮಹಾದೇವ ದೇವಾಲಯ

ಪಟ್ಟಣಂತಿಟ್ಟ ಜಿಲ್ಲೆಯ ಪೂರ್ವಭಾಗದಲ್ಲಿರುವ ನಿಲಯ್ಕಲ್ ಎಂಬ ಸ್ಥಳವಿದೆ. ಅಲ್ಲಿರುವ ಮಹಾದೇವ ದೇವಾಲಯವು ಶಬರಿಮಲೆ ಯಾತ್ರಿಕರಿಗೆ ಒಂದು ಪ್ರಧಾನ ತಂಗುದಾಣವಾಗಿದೆ. ಈ ದೇವಾಲಯವು ತಿರುವಾಂಕೂರು ದೇವಸ್ವಂ ಮಂಡಳಿಯ ಮೇಲ್ನೋಟದಲ್ಲಿದೆ. ಶಬರಿಮಲೆ ತೀರ್ಥಯಾತ್ರೆಯ ಸಂದರ್ಭದಲ್ಲಿ ಸಾಕಷ್ಟು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಶಿವನು ಇಲ್ಲಿನ ಪ್ರಧಾನ ದೇವತೆ. ಇಲ್ಲಿ ಶಿವನು ಉಗ್ರಮೂರ್ತಿಯಾಗಿ ಮತ್ತು ಮಂಗಳ ಪ್ರದಾಯಕ ಮೂರ್ತಿಯಾಗಿ ಇರುವನೆಂದು ನಂಬಲಾಗಿದೆ. ಭಗವಾನ್ ಶಿವನು ದುಷ್ಟಶಕ್ತಿಗಳ ಮೇಲಿರುವ ಕೋಪವನ್ನೆಲ್ಲ ಪ್ರಕಟಿಸಿಕೊಂಡು ತನ್ನ ಮಗನಾದ ಅಯ್ಯಪ್ಪನಿಗೆ ದುಷ್ಟಶಕ್ತಿಗಳೊಡನೆ ಹೋರಾಡಲಿರುವ ಅನುಗ್ರಹವನ್ನು ಸುರಿದನು ಎಂದು ನಂಬಲಾಗುತ್ತದೆ. ಇತರ ಶಿವ ದೇವಾಲಯಗಳಲ್ಲಿರುವಂತೆ ಇಲ್ಲಿಯೂ ದೇವಸ್ಥಾನದ ಆವರಣದಲ್ಲಿ ಎತ್ತುಗಳನ್ನು ರಕ್ಷಿಸಿ ಸಾಕುತ್ತಾರೆ. ಇಲ್ಲಿ ಕೇವಲ ಎರಡು ಉಪ ಪ್ರತಿಷ್ಠೆಗಳಿವೆ. ಭಗವಾನ್ ಕನ್ನಿಮೂಲ ಗಣಪತಿ ಮತ್ತು ನಂದಿ. ಈ ದೇವಾಲಯದಲ್ಲಿ ಪ್ರತಿದಿನ ಮೂರು ಹೊತ್ತು ಪೂಜೆಗಳು ಜರಗುತ್ತವೆ. ಬೆಳಗ್ಗಿನದು ಉಷ ಪೂಜೆ, ಮಧ್ಯಾಹ್ನದಲ್ಲಿ ಮಧ್ಯಾಹ್ನ ಪೂಜೆ ಮತ್ತು ಮುಸ್ಸಂಜೆಗೆ ದೀಪಾರಾಧನೆ. ಭಾನುವಾರ, ಸೋಮವಾರ ಮತ್ತು ಶುಕ್ರವಾರ ಇಲ್ಲಿ ವಿಶೇಷವಾದ ಸಾಪ್ತಾಹಿಕದಿನಗಳು. ವಾರ್ಷಿಕವಾಗಿ ನಡೆಯುವ ‘ಮಹಾ ಶಿವರಾತ್ರಿ’ ಹಬ್ಬ ಇಲ್ಲಿನ ಪ್ರಸಿದ್ಧ ಆಚರಣೆಗಳಲ್ಲಿ ಒಂದು. ಈ ದೇವಾಲಯವು ಪ್ರತಿವರ್ಷ ತನ್ನ ‘ತಿರುವುತ್ಸವ’ ವನ್ನು ಅದ್ದೂರಿಯಾಗಿ ಆಚರಿಸುತ್ತದೆ. ಶಬರಿಮಲೆ ತೀರ್ಥಯಾತ್ರೆಯ ಸಂದರ್ಭದಲ್ಲಿ ವಿವಿಧ ರಾಜ್ಯಗಳ ಭಕ್ತರು ಇಲ್ಲಿಗೆ ಸಂದರ್ಶನವಿತ್ತು ತಮ್ಮ ಸುಖ ಸಂಪತ್ತಿಗಾಗಿ ದೇವರುಗಳಲ್ಲಿ ಪ್ರಾರ್ಥಿಸುತ್ತಾರೆ.

 

ಸಂಪರ್ಕ

 

Connect us

ಸಹಾಯವಾಣಿ

uhh

Updated Schedule