ಅಚ್ಚನ್‌ಕೋವಿಲ್ ಶಾಸ್ತಾ ಕ್ಷೇತ್ರ

ಕೇರಳದ ಬಹುಮುಖ್ಯವಾದ ಭಗವಾನ್ ಅಯ್ಯಪ್ಪನ ದೇವಾಲಯಗಳಲ್ಲಿ ಅಚ್ಚಂಕೋವಿಲ್ ಶಾಸ್ತಾ ದೇವಸ್ಥಾನ ಅಥವಾ ಧರ್ಮಶಾಸ್ತಾ ದೇವಸ್ಥಾನವೂ ಒಂದು. ಭಗವಾನ್ ಅಯ್ಯಪ್ಪನು ಇಲ್ಲಿ ಗೃಹಸ್ಥಾಶ್ರಮಿಯಾಗಿ ಪೂಜಿಸಲ್ಪಡುತ್ತಾನೆ. ಅವನನ್ನು ಒಬ್ಬ ಕೌಟುಂಬಿಕ ವ್ಯಕ್ತಿಯಾಗಿ ಕಲ್ಪಿಸಲಾಗಿದ್ದು ಆತನು ಇಲ್ಲಿ ದಾಂಪತ್ಯ ಜೀವನವನ್ನು ನಡೆಸುತ್ತಾನೆ. ಅವನ ಇಬ್ಬರು ಹೆಂಡತಿಯರು ಪೂರ್ಣ ಮತ್ತು ಪುಷ್ಕಲಾ. ಇಲ್ಲಿರುವ ವಿಗ್ರಹವನ್ನು ಪರಶುರಾಮನು ಸ್ಥಾಪಿಸಿದನೆಂದು ನಂಬಲಾಗಿದೆ.

ಅಚ್ಚಂಕೋವಿಲ್ ಶಾಸ್ತಾ ದೇವಾಲಯವು ವಿಷದ ಹಾವುಗಳ ಕಡಿತವನ್ನು ಗುಣಪಡಿಸುವಲ್ಲಿ ಪ್ರಸಿದ್ಧವಾಗಿದೆ. ಇಲ್ಲಿನ ಅಯ್ಯಪ್ಪ ವಿಗ್ರಹದ ಎಡಗೈ ಯಾವಾಗಲೂ ಚಂದನ ಮತ್ತು ತೀರ್ಥವನ್ನು ಹೊಂದಿರುತ್ತದೆ. ಹಾವಿನ ಕಡಿತವನ್ನು ಗುಣಪಡಿಸಲು ತಕ್ಕುದಾದ ಔಷಧೀಯ ಗುಣಗಳನ್ನು ಚಂದನ ಮತ್ತು ತೀರ್ಥ ಹೊಂದಿವೆ ಎಂದು ಪರಿಗಣಿಸಲಾಗಿದೆ. ದೇವಾಲಯ ಸಂಕೀರ್ಣದಲ್ಲಿ ಅಯ್ಯಪ್ಪನ ಚರಿತ್ರೆಯೊಂದಿಗೆ ಸಂಬಂಧಿಸಿದ ಇತರ ಕೆಲವು ಪ್ರತಿಷ್ಠೆಗಳೂ ಇವೆ. ಇಲ್ಲಿ ಆಚರಣೆಗಳೂ ಹಬ್ಬಗಳೂ ತಮಿಳು ಸಂಸ್ಕೃತಿಯೊಂದಿಗೆ ಆಳವಾದ ಸಂಬಂಧವನ್ನು ಹೊಂದಿವೆ.

ಶಬರಿಮಲೆ ತೀರ್ಥಯಾತ್ರೆಯಲ್ಲಿ ಭಕ್ತರು ಈ ದೇವಾಲಯಕ್ಕೆ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸುತ್ತಾರೆ. ಧನು ಮಾಸದ ಮೊದಲ ದಿನ ತೊಡಗಿ ಹತ್ತನೇ ದಿನದವರೆಗೆ ಇಲ್ಲಿನ ಉತ್ಸವ ನಡೆದು ಬರುತ್ತಿದೆ.

 

ಸಂಪರ್ಕ

 

Connect us

ಸಹಾಯವಾಣಿ

uhh

Updated Schedule