ಅನ್ನದಾನ ಮಂಟಪ

ಶಬರಿಮಲೆ ಶ್ರೀ ಧರ್ಮಶಾಸ್ತಾ ಅನ್ನದಾನ ಟ್ರಸ್್ಟ.

ಪಶ್ಚಿಮ ಘಟ್ಟದ ಪೆರಿಯಾರ್ ಹುಲಿ ಅಭಯಾರಣ್ಯದಲ್ಲಿ ಅಂತಾರಾಷ್ಟ್ರೀಯ ಮಹತ್ವದ ಶಬರಿಮಲೆ ಧರ್ಮಶಾಸ್ತಾ ಕ್ಷೇತ್ರವಿದೆ. ಪ್ರತಿವರ್ಷ ಭಾರತೀಯರೂ ವಿದೇಶಿಗಳೂ ಕೋಟಿ ಕೋಟಿ ಸಂಖ್ಯೆಯಲ್ಲಿ ತೀರ್ಥಯಾತ್ರಿಕರಾಗಿ ಶಬರಿಮಲೆಯ ಸನ್ನಿಧಾನವನ್ನು ತಲಪುತ್ತಾರೆ. ಕ್ಷೇತ್ರದ ಪ್ರಧಾನ ಮೂರ್ತಿಯಾದ ಶ್ರೀ ಅಯ್ಯಪ್ಪ ಸ್ವಾಮಿಯನ್ನು ಯಾತ್ರಿಕರು ‘ಅನ್ನದಾನಪ್ರಭು’ ಎಂದೇ ಕರೆಯುತ್ತಾರೆ. ಆದುದರಿಂದ ಶಬರಿಮಲೆಗೆ ತಲಪುತ್ತಿರುವ ಯಾತ್ರಿಕರಿಗೆ ಉಣಬಡಿಸುವುದು ಎಂಬುದು ದೇವರಿಗೆ ಒಂದು ಸಮರ್ಪಣೆಯಾಗಿ, ಅಯ್ಯಪ್ಪಧರ್ಮವಾಗಿ ಪರಿಗಣಿತವಾಗುತ್ತದೆ. ಶಬರಿಮಲೆ ಕ್ಷೇತ್ರದ ಆಡಳಿತ ಸಮಿತಿಯಾದ ತಿರುವಾಂಕೂರ್ ದೇವಸ್ವಂಬೋರ್ಡ್ ತೀರ್ಥಯಾತ್ರಿಕರಿಗೆ ಶಬರಿಮಲೆಯಲ್ಲಿಯೂ ಪಂಬೆಯಲ್ಲಿಯೂ, ನಡುನಡುವೆ ಬರುವ ತಂಗುದಾಣಗಳಲ್ಲೂ ಉಚಿತವಾದ ಊಟದ ಯೋಜನೆಯನ್ನು ಜಾರಿಗೆ ತಂದಿದೆ. ಕೋಟಿ ಸಂಖ್ಯೆಯಲ್ಲಿ ತೀರ್ಥಯಾತ್ರಿಕರು ಬರುತ್ತಿರುವುದರಿಂದ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವುದಕ್ಕೆ ಸಂಪನ್ಮೂಲದ ಅಗತ್ಯವಿದೆ. ಶಬರಿಮಲೆಯಲ್ಲಿಯೂ ಇತರ ದೇವಾಲಯಗಳಲ್ಲಿಯೂ ಭಕ್ತರಿಗೆ ಉಚಿತ ಊಟದ ವ್ಯವಸ್ಥೆ ಮಾಡುವುದಕ್ಕಾಗಿ ದೇವಸ್ವಂಬೋರ್ಡ್ ಶಬರಿಮಲೆ ‘ಶ್ರೀ ಧರ್ಮಶಾಸ್ತಾ ಅನ್ನದಾನ ಟ್ರಸ್ಟ್’ ಎಂಬ ಹೆಸರಿನಲ್ಲಿ ಒಂದು ಟ್ರಸ್ಟನ್ನುರೂಪಿಸಿದೆ. ಇದೇ ಟ್ರಸ್ಟ್ ಮಾಳಿಕಪ್ಪುರ ಕ್ಷೇತ್ರದ ಹಿಂದೆ ಒಂದು ಅನ್ನದಾನ ಮಂಟಪವನ್ನು ನಿರ್ಮಿಸಿದೆ. ಇದು ಸಮಸ್ತ ಭಾರತದಲ್ಲಿಯೇ ಅತಿ ಬೃಹತ್ತಾದ ಅನ್ನದಾನ ಮಂಟಪವೆನಿಸಿದೆ. ಸದಾ ಎರಡು ಲಕ್ಷಕ್ಕೂ ಮಿಗಿಲಾದ ಯಾತ್ರಿಕರಿಗೆ ಉಚಿತವಾದ ಆಹಾರವನ್ನು ಒದಗಿಸಲು ಮಂಟಪ ಸನ್ನದ್ಧವಾಗಿದೆ.

ಈ ಯೋಜನೆಗೆ ದೇಣಿಗೆ ಕಳಿಸಿಕೊಡಲಿರುವ ವಿಳಾಸ:
ಎಕ್ಸಿಕ್ಯೂಟೀವ್ ಆಫೀಸರ್, ಶಬರಿಮಲ ದೇವಸ್ವಂ,
ಪಟ್ಟಣಂತಿಟ್ಟ ಜಿಲ್ಲೆ, ಕೇರಳ. ದೂರವಾಣಿ: 04735-202028

ಅಥವಾ

ದೇವಸ್ವಂ ಅಕೌಂಟ್ ಆಫೀಸರ್
ತಿರುವಾಂಕೂರು ದೇವಸ್ವಂ ಬೋರ್ಡ್
ನಂದನ್ಕೋಡ್, ತಿರುವನಂತಪುರಂ
ದೂರವಾಣಿ : 0471-2315837
Fax: 0471-2315834
E.mail: devaswomaccountsoffier@gmail.com

ಶಬರಿಮಲೆ ಶ್ರೀಧರ್ಮಶಾಸ್ತಾ ಅನ್ನದಾನ ಟ್ರಸ್ಟ್ನ ಹೆಸರಿನಲ್ಲಿ ಕ್ರಾಸ್ ಮಾಡಿದ ಚೆಕ್ ಅಥವಾ ಡಿ.ಡಿ ರೂಪದಲ್ಲಿಯೂ ದೇಣಿಗೆ ನೀಡಬಹುದಾಗಿದೆ. ನೀಡುವ ದೇಣಿಗೆಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80G (5) (VI) ಅಡಿಯಲ್ಲಿ ವಿನಾಯಿತಿ ಲಭಿಸುತ್ತದೆ.

RTGS/NEFT ಮೂಲಕ ವ್ಯವಹಾರಕ್ಕಿರುವ ಖಾತೆ ಸಂಖ್ಯೆಗಳು.

ಧನಲಕ್ಷ್ಮೀ ಬ್ಯಾಂಕ್, ನಂದನ್ ಕೋಡ್, ತಿರುವನಂತಪುರಂ
ಖಾತೆ ಸಂಖ್ಯೆ : 012601200000086
IFSC Code  : DLXB0000275
ಎಚ್.ಡಿ.ಎಫ್.ಸಿ. ಬ್ಯಾಂಕ್, ಶಾಸ್ತಮಂಗಲಂ, ತಿರುವನಂತಪುರಂ
ಅಕೌಂಟ್ ನಂಬರು : 15991110000014
IFSC Code  : HDFC0001599
ಶಬರಿಮಲೆಯ ಅಧಿಕೃತ ವೆಬ್ಸೈಟ್ ಮೂಲಕ ಓನ್ಲೈನ್ ದೇಣಿಗೆಗಳನ್ನು ಸ್ವೀಕರಿಸಲಾಗುತ್ತದೆ.
www.sabarimala.tdb.org.in.
ಅಥವಾ ಧನಲಕ್ಷ್ಮೀ ಬ್ಯಾಂಕ್ನ ಇಲ್ಲವೆ ಎಚ್.ಡಿ.ಎಫ್.ಸಿ ಬ್ಯಾಂಕ್ನ ನೆಟ್ಬ್ಯಾಂಕಿಂಗ್ ಸೌಕರ್ಯವನ್ನು ಉಪಯೋಗಿಸಿಕೊಳ್ಳಬಹುದು.
www.dhanbank.com
www.hdfcbanks.com


ಈ ಯೋಜನೆಯಡಿ ನೀಡಿದ ಕೊಡುಗೆಗಾಗಿ ಲಭಿಸುವ ಅನುಕೂಲತೆಗಳು.

ಐವತ್ತು ಲಕ್ಷ ರೂಪಾಯಿ
ದಾನಿ ಅಥವಾ ನಾಮಿನಿ ಹೆಸರಿನಲ್ಲಿ ಹತ್ತು ವರ್ಷಗಳ ಕಾಲ ದಿನಾ ಮೂರು ಹೊತ್ತು ಅನ್ನದಾನ ಮಾಡಲಾಗುತ್ತದೆ. ಮಂಡಲ ಪೂಜೆಗೂ ಮಕರವಿಳಕ್ಕಿಗೂ ಹಿಂದಿನ ನಾಲ್ಕು ದಿನಗಳನ್ನು ಬಿಟ್ಟು ವರ್ಷದಲ್ಲಿ ಐದು ದಿನ ಉಚಿತ ವಸತಿ ಸೌಕರ್ಯದೊಂದಿಗೆ ಸಾವಕಾಶವಾಗಿ ದೇವರ ದರ್ಶನ ಮಾಡುವ ಸವಲತ್ತು ಲಭಿಸುತ್ತದೆ. ಅರವಣದ ಎರಡು ಕ್ಯಾನ್ (ತಲಾ 250. ಮಿ.ಲಿ) ಮತ್ತು ಹದಿನೈದು ವರ್ಷಗಳ ಕಾಲ ಎರಡು ಪ್ಯಾಕೆಟ್ ಅಪ್ಪಂ ಅನ್ನು ಒಳಗೊಂಡ ಪ್ರಸಾದ ಕಿಟ್ ಲಭಿಸುವುದು.

ಇಪ್ಪತ್ತೈದು ಲಕ್ಷ ರೂಪಾಯಿ
ದಾನಿಗಳ ಅಥವಾ ಅವರು ಸೂಚಿಸುವ ವ್ಯಕ್ತಿಗಳ ಹೆಸರಿನಲ್ಲಿ ನಾಲ್ಕು ವರ್ಷಗಳ ಕಾಲ ದಿನಾ ಮೂರು ಹೊತ್ತು ಅನ್ನದಾನ ನಡೆಯುವುದು.
ಮಂಡಲಪೂಜೆ ಮತ್ತು ಮಕರವಿಳಕ್ಕಿಗೆ ಹಿಂದಿನ ನಾಲ್ಕು ದಿನಗಳನ್ನು ಹೊರತುಪಡಿಸಿ ವರ್ಷದಲ್ಲಿ ಮೂರು ದಿನಗಳವರೆಗೆ ಬಾಡಿಗೆಮುಕ್ತ ವಸತಿ, ಸಾವಕಾಶವಾದ ಸ್ವಾಮಿಯ ದರ್ಶನ ವ್ಯವಸ್ಥೆ ಲಭಿಸುವುದು. ಅರವಣದ ಎರಡು ಕ್ಯಾನ್ಗಳು(ತಲಾ 250ಮಿ.ಲಿ) ಮತ್ತು ಹತು್ತವರ್ಷ ಗಳ ಕಾಲ ಅಪ್ಪಂನ ಎರಡು ಪ್ಯಾಕೆಟ್ಗಳನ್ನೊಳಗೊಂಡ ಪ್ರಸಾದ ಕಿಟ್

ಇಪ್ಪತ್ತು ಲಕ್ಷ ರೂಪಾಯಿ
ದಾನಿ/ನಾಮಿನಿ ಹೆಸರಿನಲ್ಲಿ ಮೂರು ವರ್ಷಗಳವರೆಗೆ ದಿನಕ್ಕೆ ಮೂರು ಬಾರಿಯಂತೆ ಅನ್ನದಾನ ಮಾಡಲಾಗುವುದು.
ಮಂಡಲಪೂಜೆ ಮತ್ತು ಮಕರವಿಳಕ್ಕಿನ ಹಿಂದಿನ ನಾಲ್ಕು ದಿನಗಳನ್ನು ಹೊರತುಪಡಿಸಿ ವರ್ಷದಲ್ಲಿ ಮೂರು ದಿನಗಳವರೆಗೆ ಉಚಿತ ವಸತಿ ಮತ್ತು ಅನುಕೂಲಕರ ದರ್ಶನ ಸೌಲಭ್ಯ.
ಅರವಣದ ಎರಡು ಕ್ಯಾನ್ಗಳು (ತಲಾ 250 ಮಿ.ಲಿ) ಮತ್ತು ಹತ್ತು ವರ್ಷಗಳ ಕಾಲ ಅಪ್ಪಂನ ಎರಡು ಪ್ಯಾಕೆಟುಗಳನ್ನೊಳಗೊಂಡ ಪ್ರಸಾದ ಕಿಟ್

ರೂಪಾಯಿ ಹದಿನೈದು ಲಕ್ಷ
ದಾನಿ/ ನಾಮಿನಿ ಹೆಸರಿನಲ್ಲಿ ಮೂರು ವರ್ಷಗಳ ಕಾಲ ದಿನಕ್ಕೆ ಮೂರು ಬಾರಿಯಂತೆ ಅನ್ನದಾನ ವ್ಯವಸ್ಥೆ
ಐದು ವರ್ಷಗಳ ಕಾಲ ಮಂಡಲ ಪೂಜೆ ಮತ್ತು ಮಕರವಿಳಕ್ಕಿಗೆ ಹಿಂದಿನ ನಾಲ್ಕು ದಿನಗಳನ್ನು ಹೊರತುಪಡಿಸಿ ವರ್ಷದಲ್ಲಿ ಮೂರು ದಿನಗಳವರೆಗೆ ಉಚಿತ ವಸತಿ ಮತ್ತು ಅನುಕೂಲಕರ ದರ್ಶನ ಸೌಲಭ್ಯ. ಅರವಣದ ಎರಡು ಕ್ಯಾನ್ಗಳು(ತಲಾ 250ಮಿ.ಲಿ) ಮತ್ತು ಹತ್ತು ವರ್ಷಗಳ ಕಾಲ ಅಪ್ಪಂನ ಎರಡು ಪ್ಯಾಕೆಟ್ಗಳನ್ನು ಒಳಗೊಂಡ ಪ್ರಸಾದ ಕಿಟ್

ರೂಪಾಯಿ ಹತ್ತು ಲಕ್ಷ
ದಾನಿ/ನಾಮಿನಿ ಹೆಸರಿನಲ್ಲಿ ಎರಡು ವರ್ಷಗಳ ಕಾಲ ದಿನಕ್ಕೆ ಎರಡು ಬಾರಿಯಂತೆ ಅನ್ನದಾನ ಮಾಡಲಾಗುವುದು. ಐದು ವರ್ಷಗಳ ಕಾಲ ಮಂಡಲ ಪೂಜೆ ಮತ್ತು ಮಕರವಿಳಕ್ಕಿಗೆ ಹಿಂದಿನ ನಾಲ್ಕು ದಿನಗಳನ್ನು ಹೊರತುಪಡಿಸಿ ವರ್ಷದಲ್ಲಿ ಎರಡು ದಿನ ಉಚಿತ ವಸತಿ ಮತ್ತು ಅನುಕೂಲಕರ ದರ್ಶನ ಸೌಲಭ್ಯ. ಅರವಣದ ಎರಡು ಕ್ಯಾನ್ಗಳು (ತಲಾ 250 ಮಿ.ಲಿ) ಮತ್ತು ಹತ್ತು ವರ್ಷಗಳ ಕಾಲ ಅಪ್ಪಂನ ಎರಡು ಪ್ಯಾಕೆಟ್ಗಳನ್ನು ಒಳಗೊಂಡ ಪ್ರಸಾದ ಕಿಟ್.

ರೂಪಾಯಿ ಐದು ಲಕ್ಷ
ದಾನಿ/ನಾಮಿನಿ ಹೆಸರಿನಲ್ಲಿ ಒಂದು ವರ್ಷ ಕಾಲ ದಿನಕ್ಕೆ ಎರಡು ಬಾರಿಯಂತೆ ಅನ್ನದಾನ ಮಾಡಲಾಗುವುದು. ಮಂಡಲ ಪೂಜೆ ಮತ್ತು ಮಕರವಿಳಕ್ಕಿಗೆ ಹಿಂದಿನ ನಾಲ್ಕು ದಿನಗಳನ್ನು ಹೊರತುಪಡಿಸಿ ವರ್ಷದಲ್ಲಿ ಒಂದು ದಿನ ಉಚಿತ ವಸತಿ ಮತ್ತು ಅನುಕೂಲಕರ ದರ್ಶನ ಸೌಲಭ್ಯ. ಅರವಣದ ಎರಡು ಕ್ಯಾನ್ಗಳು(ತಲಾ 250ಮಿ.ಲಿ) ಮತ್ತು ಹತು್ತವರ್ಷಗಳ ಕಾಲ ಅಪ್ಪಂನ ಎರಡು ಪ್ಯಾಕೆಟ್ಗಳನ್ನೊಳಗೊಂಡ ಪ್ರಸಾದ ಕಿಟ್

ರೂಪಾಯಿ ಮೂರು ಲಕ್ಷ
ದಾನಿ/ನಾಮಿನಿಯ ಹೆಸರಿನಲ್ಲಿ ಒಂದು ವರ್ಷ ಕಾಲ ದಿನಕ್ಕೆ ಒಂದು ಬಾರಿಯಂತೆ ಅನ್ನದಾನ ಮಾಡಲಾಗುವುದು. ಮಂಡಲ ಪೂಜೆ ಮತ್ತು ಮಕರವಿಳಕ್ಕಿಗೆ ಹಿಂದಿನ ನಾಲ್ಕು ದಿನಗಳನ್ನು ಹೊರತುಪಡಿಸಿ ವರ್ಷದಲ್ಲಿ ಒಂದು ದಿನ ಉಚಿತ ವಸತಿ ಮತ್ತು ಅನುಕೂಲಕರ ದರ್ಶನ ಸೌಲಭ್ಯ. ಅರವಣದ ಎರಡು ಕ್ಯಾನ್ಗಳು (ತಲಾ 250 ಮಿ.ಲಿ) ಮತ್ತು ಹತ್ತು ವರ್ಷಗಳ ಕಾಲ ಅಪ್ಪಂನ ಎರಡು ಪ್ಯಾಕೆಟ್ಗಳನ್ನು ಒಳಗೊಂಡ ಪ್ರಸಾದ ಕಿಟ್.

ಭಕ್ತನು ಯಾವುದೇ ಮೊತ್ತವನ್ನು ರೂ. 100ರ ಗುಣಕದಲ್ಲಿ ದಾನ ಮಾಡಬಹುದು.

ಸಂಸ್ಥೆಗಳು, ಕಂಪನಿಗಳು ಮತ್ತು ಜಂಟಿ ದಾನಿಗಳು/ಪ್ರಾಯೋಜಕರ ವಿಷಯದಲ್ಲಿ ಸವಲತ್ತುಗಳನ್ನು ನಾಮಿನಿಗೆ ವಿಸ್ತರಿಸಲಾಗುವುದು. ವೈಯುಕ್ತಿಕ ದಾನಿಗಳು/ಪ್ರಾಯೋಜಕರು ಬಯಸಿದಲ್ಲಿ ನಾಮ ನಿರ್ದೇಶನ ಸೌಲಭ್ಯ ವನ್ನು ಬಳಸಿಕೊಳ್ಳಲು ಒಪ್ಪಿಗೆ ನೀಡಲಾಗುವುದು. ಈ ಯೋಜನೆಯಡಿ ಅನ್ನದಾನವನ್ನು ಎಲ್ಲ ಭಕ್ತರಿಗೆ ಯಾವುದೇ ಮಿತಿಯಿಲ್ಲದೆ ನೀಡಲಾಗುವುದು.

ಅಯ್ಯಪ್ಪ ಸ್ವಾಮಿಯ ಅನುಗ್ರಹದೊಂದಿಗೆ,
ಶಬರಿಮಲೆ ಶ್ರೀ ಧರ್ಮಶಾಸ್ತಾ ಅನ್ನದಾನ ಟ್ರಸ್ಟಿನ ಪರವಾಗಿ,

ದೇವಸ್ವಂ ಆಯುಕ್ತ ಮತ್ತು ಟ್ರಸ್ಟಿ
ದೇವಸ್ವಂ ಆಯುಕ್ತ ಕಛೇರಿ
ನಂದನ್ಕೋಡ್, ತಿರುವನಂತಪುರಂ-695003
ದೂರವಾಣಿ : 0471-2315156, 2314288
Fax: 0471-2315156
E-mail: sabarimala.annadanam@gmail.com