ಮಲಯಾಲಪ್ಪುಳ ದೇವೀ ದೇವಾಲಯ

ಮಲಯಾಲಪ್ಪುಳ ದೇವೀ ದೇವಾಲಯವು ಕೇರಳದ ಮಲಯಾಲಪ್ಪುಳ ಎಂಬ ಊರಿನಲ್ಲಿದೆ. ಇದು ಭಗವತಿ ದೇವಿಯ ಆರಾಧನೆಗೆ ಮೀಸಲಾದ ದೇವಾಲಯವಾಗಿದ್ದು ಕೇರಳದ ಸುಪ್ರಸಿದ್ಧವೂ ಪ್ರಬಲವೂ ಆದ ಶಕ್ತಿ ದೇವಾಲಯವಾಗಿದೆ. ಈ ದೇವಾಲಯದಲ್ಲಿ ಒಂದು ಚಿಕ್ಕ ನಮಸ್ಕಾರ ಮಂಟಪವೂ ಚುತ್ತಂಬಲವೂ, ಒಳಗೆ ಒಂದು ಬಲಿಕಲ್ಲು ಗುಡಿಯೂ ಇವೆ. ದೇವಾಲಯವು ಮೂರು ಸಾವಿರ ವರ್ಷಗಳಿಗೂ ಹೆಚ್ಚು ಹಳೆಯದೆಂದು ನಂಬಲಾಗುತ್ತದೆ. ಈ ದೇವಾಲಯವು ಪೂರ್ವದ ಪ್ರವೇಶದ್ವಾರದಲ್ಲಿ ಮಧ್ಯಮ ಗಾತ್ರದ ಭವ್ಯವಾದ ಗೋಪುರವನ್ನು ಹೊಂದಿದೆ. ಆಯತಾಕಾರದಲ್ಲಿರುವ ಗರ್ಭಗೃಹವು ಮುಖಮಂಟಪವನ್ನು ಹೊಂದಿದೆ. ‘ಕಡು ಶರ್ಕರ ಯೋಗಂ’ ಎಂಬ ತಂತ್ರವನ್ನು ಬಳಸಿ ಇಲ್ಲಿನ ವಿಗ್ರಹವನ್ನು ತಯಾರಿಸಲಾಗಿದೆ.

ಹಲವು ರೀತಿಯ ಮರದ ತುಂಡುಗಳು, ಆವೆ ಮಣ್ಣು, ಆಯುರ್ವೇದ ಗಿಡಮೂಲಿಕೆಗಳು, ಹಾಲು, ತುಪ್ಪ, ಬೆಲ್ಲ, ಅರಸಿನ, ಶ್ರೀಗಂಧ, ಕರ್ಪೂರ, ಚಿನ್ನ, ಬೆಳ್ಳಿ, ಮರಳು ಮತ್ತು ನೈಸರ್ಗಿಕ ಅಂಟುಗಳನ್ನು ವಿಗ್ರಹ ನಿರ್ಮಾಣಕ್ಕೆ ಉಪಯೋಗಿಸಲಾಗಿದೆ. ಮಾನವ ದೇಹವನ್ನು ಹೋಲುವಂತೆ ಪ್ರಮಾಣಬದ್ಧವಾಗಿ ಎಲ್ಲ ಅಂಗಾಂಗಗಳನ್ನು ಒಳಗೊಳ್ಳಿಸಲಾಗಿದೆ. ಪ್ರತಿಷ್ಠಾ ಕರ್ಮದ ಭಾಗವಾಗಿ ತಾಂತ್ರಿಕ ವಿಧಿ ಪ್ರಕಾರ ಪ್ರಾಣ ಪ್ರತಿಷ್ಠಾ ಕರ್ಮದಿಂದ (ಜೀವ ತುಂಬುವ ಕರ್ಮ) ವಿಗ್ರಹಕ್ಕೆ ಪುರೋಹಿತರು ಶಕ್ತಿಯನ್ನೂ ಚೈತನ್ಯವನ್ನೂ ತುಂಬಿರುತ್ತಾರೆ. ಕ್ಷೇತ್ರದ ಸ್ವಯಂಭೂ ಆದ ಶಿವಲಿಂಗವು ಬೆಳೆಯುತ್ತಲೇ ಇರುತ್ತದೆ ಎಂಬುದು ಇಲ್ಲಿನ ನಂಬಿಕೆ. ಹೂಬಿಟ್ಟುಕೊಂಡಿರುವ ಒಂದು ಕೊನ್ನೆ ಮರದ ನೆರಳಿನಲ್ಲಿರುವ ಈ ಶಿವಲಿಂಗಕ್ಕೆ ಗುಡಿಯಿಲ್ಲ. ಭದ್ರಕಾಳಿ ದೇವಿ ಈ ದೇವಾಲಯದ ಪ್ರಧಾನ ಪ್ರತಿಷ್ಠೆ. ಇವಳು ಪಾರ್ವತಿ ದೇವಿಯ ಉಗ್ರರೂಪದ ಪ್ರತಿರೂಪವಾದ ಭದ್ರಕಾಳಿ ದೇವಿ. ಆದರೆ ಭಕ್ತರಿಗೆ ವಾತ್ಸಲ್ಯಮಯಿಯಾದ ತಾಯಿ. ಇಲ್ಲಿ ಪ್ರತಿಷ್ಠೆಯು ಐದೂವರೆ ಅಡಿ ಎತ್ತರವನ್ನು ಹೊಂದಿದೆ. ಇತರ ಕ್ಷೇತ್ರಗಳ ಶಿಲಾ ವಿಗ್ರಹಗಳಿಗಿಂತ ಬೇರೆಯಾಗಿ ಹಲವು ಬಗೆಯ ವಸ್ತುಗಳಿಂದ ನಿರ್ಮಾಣಗೊಂಡ ವಿಗ್ರಹವಿದು. ಇಲ್ಲಿ ವಿನಾಯಕ ಚತುರ್ಥಿ, ನವರಾತ್ರಿ, ಶಿವರಾತ್ರಿ ಮೊದಲಾದ ಸುಪ್ರಧಾನ ಆಚರಣೆಗಳನ್ನು ದೊಡ್ಡ ಪ್ರಾಣದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಮಂಗಳವಾರ ಮತ್ತು ಶುಕ್ರವಾರಗಳು ಎಲ್ಲಾ ದೇವಿ ಕ್ಷೇತ್ರಗಳಂತೆ ಇಲ್ಲಿಯೂ ವಾರದ ಬಹುಮುಖ್ಯವಾದ ದಿನಗಳು. ಭಾರೀ ಜನಸಂದಣಿ ಸೇರುವ ಈ ದಿನಗಳಲ್ಲಿ ದರ್ಶನಕ್ಕಾಗಿ ತುಂಬಾ ಸಮಯ ಕಾದು ನಿಲ್ಲಬೇಕಾಗುತ್ತದೆ. ಕುಂಭ ಮಾಸದ (ಮಾರ್ಚ್) ಆರ್ದ್ರಾ ನಕ್ಷತ್ರದಂದು ಇಲ್ಲಿನ ವಾರ್ಷಿಕೋತ್ಸವ ಆರಂಭವಾಗುತ್ತದೆ. ಹನ್ನೊಂದನೇ ದಿನದ ಆರಾಟ್ಟಿನೊಂದಿಗೆ (ದೇವಾಲಯದ ತೊಟ್ಟಿಯಲ್ಲಿಯೋ ಕೊಳದಲ್ಲಿಯೋ ವಿಗ್ರಹವನ್ನು ಮುಳುಗಿಸಿ ತೆಗೆಯುವುದು) ಉತ್ಸವವು ಸಮಾಪನಗೊಳ್ಳುತ್ತದೆ.

ದೋಣಿಯಕ್ಕಿ ಪಾಯಸ, ತುಪ್ಪ ದೀಪ, ನಿರಪರ (ಅಕ್ಕಿ, ಬತ್ತ, ಸಕ್ಕರೆ ಮೊದಲಾದವುಗಳನ್ನು ಪರೆಯಲ್ಲಿ ತುಂಬಿಸಿ ನಿವೇದಿಸುವುದು) ಇತ್ಯಾದಿ ಇಲ್ಲಿನ ಸೇವೆಗಳು. ವಿಭೂತಿ, ಚಂದನ, ಹಾಲು, ತುಪ್ಪ, ಸೀಯಾಳ ನೀರು ಎಂಬಿವುಗಳಿಂದ ಇಲ್ಲಿನ ಅಭಿಷೇಕ ನಡೆಯುತ್ತದೆ. 

 

ಸಂಪರ್ಕ

 

Connect us

ಸಹಾಯವಾಣಿ

uhh

Updated Schedule