ಚೆಂಗನ್ನೂರು ಮಹಾದೇವ ದೇವಾಲಯ

ಆಲಪ್ಪುಳ ಜಿಲ್ಲೆಯ ಪ್ರಾಚೀನವೂ ಪ್ರಸಿದ್ಧವೂ ಆದ ದೇವಾಲಯಗಳಲ್ಲಿ ಚೆಂಗನ್ನೂರು ಮಹಾದೇವ ದೇವಾಲಯವು ಒಂದು. ವಿಶಾಲವಾದ ಪ್ರದೇಶದಲ್ಲಿ ವ್ಯಾಪಿಸಿಕೊಂಡಿರುವ ದೇವಾಲಯ ಸಮುಚ್ಚಯವೂ ವೃತ್ತಾಕಾರದಲ್ಲಿರುವ ಗರ್ಭಗುಡಿಯೂ ಇಲ್ಲಿವೆ. ಭಗವಾನ್ ಶಿವನೂ ಪಾರ್ವತೀ ದೇವಿಯೂ ಇಲ್ಲಿನ ಪ್ರಧಾನ ಪ್ರತಿಷ್ಠೆಗಳು. ಇಲ್ಲಿ ಭಗವಾನ್ ಶಿವನು ಪೂರ್ವ ದಿಕ್ಕಿಗೂ ದೇವಿಯು ಪಶ್ಚಿಮ ದಿಕ್ಕಿಗೂ ಮುಖ ಮಾಡಿರುವರು. ಇಲ್ಲಿಯ ಮುಖ್ಯ ಪ್ರತಿಷ್ಠೆಯು ತಾಮ್ರ ಲೇಪಿಸಿದ ತ್ರಿಕೋನ ಸ್ತಂಭದ ಆಕೃತಿಯಲ್ಲಿದೆ. ದೇವಿಯ ವಿಗ್ರಹವು ಪಂಚಲೋಹದ್ದು. ಶಿವಶಕ್ತಿ ಸಂಗಮದ ಸಂಕೇತವಾಗಿರುವ ಅರ್ಧನಾರೀಶ್ವರ ರೂಪವನ್ನು ಕೊರೆದ ಚಿನ್ನದ ತಗಡಿನಿಂದ ಮಾಡಿದ ಕವಚ ಇಲ್ಲಿದೆ.

ಈ ಕ್ಷೇತ್ರದ ಉಪ ಪ್ರತಿಷ್ಠೆಗಳು ಗಣಪತಿ, ಶಾಸ್ತಾವು (ಸ್ವಾಮಿ ಅಯ್ಯಪ್ಪ), ಚಂಡಿಕೇಶ್ವರ, ನೀಲಗ್ರೀವ, ಗಂಗೆ, ನಾಗ ಎಂಬಿವು. ಇತ್ತೀಚೆಗೆ ಇಲ್ಲಿ ಶ್ರೀಕೃಷ್ಣನ ಪ್ರತಿಷ್ಠೆಯೂ ಆಗಿದೆ. ಪ್ರಸಿದ್ಧನಾದ ಪೆರುಂದಚ್ಚನ್ ರೂಪಿಸಿದ ವಾಸ್ತು ರಚನೆಯಲ್ಲಿರುವ ಈ ಕ್ಷೇತ್ರ ಶತಮಾನಗಳ ಹಿಂದೆ ನಿರ್ಮಾಣಗೊಂಡುದಾಗಿದೆ. 18ನೇ ಶತಮಾನದಲ್ಲಿ ಕ್ಷೇತ್ರ ಸಮುಚ್ಚಯ ಅಗ್ನಿಬಾಧೆಗೊಳಗಾಗಿ ಕಟ್ಟಡದ ಕೆಲವು ಭಾಗಗಳು ವಿರೂಪಗೊಂಡುವು. ಅವುಗಳನ್ನು ವಂಜಿಪುಯ ತಂಬುರಾನ್ ನವೀಕರಿಸಿದರು. ಆದರೆ ಪೆರುಂದಚ್ಚನ ವಾಸ್ತು ಶೈಲಿಯಲ್ಲಿ ನಿರ್ಮಿಸಿದ ದೇವಾಲಯವನ್ನು ಅದರ ಪೂರ್ವಸ್ಥಿತಿಗೆ ತರಲು ಸಾಧ್ಯವಾಗಿಲ್ಲ. ದೇವಾಲಯದ ಮುಂದಿರುವ ಮುಖಮಂಟಪಗಳಲ್ಲೂ ದಾರುಶಿಲ್ಪದ ಧಾರಾಳ ಕೆತ್ತನೆಗಳಿವೆ. ಇತರ ಕ್ಷೇತ್ರಗಳಿಗಿಂತ ಭಿನ್ನವಾಗಿ ತುಂಬ ವಿಶೇಷತೆಗಳನ್ನು ಈ ಕ್ಷೇತ್ರ ಹೊಂದಿರುತ್ತದೆ.

ಸಂಪರ್ಕ

 

Connect us

ಸಹಾಯವಾಣಿ

uhh

Updated Schedule