ಕುಳತ್ತುಪ್ಪುಳ ಶಾಸ್ತಾ ದೇವಾಲಯ

ಕೊಲ್ಲಂ ಜಿಲ್ಲೆಯ ಪತ್ತನಾಪುರಂ ತಾಲೂಕಿನ ಕಲ್ಲಡ ನದಿಯ ಉಪ ನದಿಯಾದ ಕುಳತ್ತುಪ್ಪುಳದ ತೀರದಲ್ಲಿ ಕುಳತ್ತುಪ್ಪುಳ ಶಾಸ್ತಾ ದೇವಾಲಯವಿದೆ. ಇಲ್ಲಿ ಪ್ರಧಾನ ದೇವರು ಬಾಲಕ ಶಾಸ್ತನ ರೂಪದಲ್ಲಿರುವ ಭಗವಾನ್ ಅಯ್ಯಪ್ಪ. ಇಲ್ಲಿರುವ ದೇವರ ವಿಗ್ರಹವನ್ನು ಪರಶುರಾಮನೇ ಸ್ಥಾಪಿಸಿದನೆಂಬ ನಂಬಿಕೆಯಿದೆ. ಇಲ್ಲಿರುವ ದೇವರು ಉಗ್ರಮನಸ್ಥಿತಿ(ಉಗ್ರಮೂರ್ತಿ) ಮತ್ತು ಶುಭಮನಸ್ಥಿತಿ(ಮಂಗಳ ಪ್ರದಾಯಕ) ಎರಡನ್ನೂ ಹೊಂದಿರುವರು. ಶಿವ, ಯಕ್ಷಿ, ವಿಷ್ಣು, ಗಣಪತಿ, ಭೂತನಾಥ, ನಾಗರ ಮತ್ತು ಕರುಪ್ಪ ಸ್ವಾಮಿ ಇವರೆಲ್ಲ ದೇವಾಲಯದ ಉಪದೇವತೆಗಳು. ಈ ದೇವಸ್ಥಾನವನ್ನು ಪಂದಲಂ ರಾಜನು ಕಟ್ಟಿಸಿದನೆಂದು ಹೇಳಲಾಗುತ್ತದೆ. ಆದರೆ ಶಾಸ್ತಾವಿನ ವಿಗ್ರಹವನ್ನು ಕೊಟ್ಟಾರಕರ ಬ್ರಾಹ್ಮಣರು ಸ್ಥಾಪಿಸಿದರೆಂಬ ಹೇಳಿಕೆಯೂ ಉಂಟು. ಈ ಹಿಂದೆ ದೇವಾಲಯವು ಕೊಟ್ಟಾರಕರ ರಾಜನ ಅಧೀನದಲ್ಲಿತ್ತು. ಆನಂತರ ತಿರುವಾಂಕೂರು ದೇವಸ್ವಂ ಮಂಡಳಿಗೆ ಹಸ್ತಾಂತರಿಸಲಾಯಿತು. ದೇವಾಲಯದ ಸಮೀಪದಲ್ಲಿರುವ ಕೊಳವು ಇಲ್ಲಿನ ಇನ್ನೊಂದು ಆಕರ್ಷಣೆ. ಚರ್ಮದಲ್ಲಿನ ಕೆಡುಗಳನ್ನು (ಒಂದು ಬಗೆಯ ಚರ್ಮರೋಗ) ಗುಣಪಡಿಸಲು ಮೀನೂಟು ಸೇವೆಯನ್ನು (ಮೀನಿಗೆ ಆಹಾರ ನೀಡುವುದು) ನಡೆಸುತ್ತಾರೆ. ಭಕ್ತರೆಲ್ಲರೂ ಈ ಕೊಳದಲ್ಲಿರುವ ಮೀನುಗಳನ್ನು ರಕ್ಷಿಸುವ ಬಗ್ಗೆ ತುಂಬಾ ಕಾಳಜಿವಹಿಸುತ್ತಾರೆ. ಮೀನುಗಳು ಸ್ವಾಮಿ ಅಯ್ಯಪ್ಪನಿಗೆ ಬಹಳ ಪ್ರೀತಿಯವು ಎಂದು ಪರಿಗಣಿಸುತ್ತಾರೆ. ಮೀನುಗಾರಿಕೆಯನ್ನು ಇಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ದೇವಾಲಯದ ತಾಂತ್ರಿಕ ಹಕ್ಕುಗಳನ್ನು ಕೊಕ್ಕಲತ್ತ್ ಮಠ ಹೊಂದಿದೆ. ಈ ದೇವಾಲಯವು ಕೊಲ್ಲಂನ ಪೂರ್ವ ದಿಕ್ಕಿನಲ್ಲಿರುವ ಮೀಸಲು ಅರಣ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ತಿರುವನಂತಪುರಂ-ಚೆಂಕೋಟ್ಟ ಹೆದ್ದಾರಿಯು ಕುಳತ್ತುಪ್ಪುಳದ ಮೂಲಕ ಹಾದು ಹೋಗುತ್ತದೆ. ತಮಿಳುನಾಡಿನ ಭಕ್ತರು ತೆಂಕಾಶಿ, ಚೆಂಕೋಟ್ಯ, ಅರಿಯಂಗಾವ್, ತೆನ್ಮಲ ಮೂಲಕ ದೇವಾಲಯವನ್ನು ತಲಪಬಹುದಾಗಿದೆ. ಇಲ್ಲಿಗೆ ಅತಿ ಹತ್ತಿರದ ರೈಲು ನಿಲ್ದಾಣ ಹತ್ತು ಕಿ.ಮೀ. ದೂರದಲ್ಲಿರುವ ತೆನ್ಮಲ ಸ್ಟೇಷನ್. ಇಲ್ಲಿ ವಿಶು ಹಬ್ಬವು ಪ್ರಮುಖವಾದ ಮಹೋತ್ಸವವಾಗಿದೆ. ತಿರುವುತ್ಸವವನ್ನು ಮೇಷ ಮಾಸದ(ಮೇಡಂ) ದಿನಾಂಕ 5 ರಿಂದ 14 ರ ವರೆಗೆ ಆಚರಿಸಲಾಗುತ್ತದೆ.

ಸಂಪರ್ಕ

 

Connect us

ಸಹಾಯವಾಣಿ

uhh

Updated Schedule